KN/Prabhupada 1076 - ಮರಣಕಾಲದಲ್ಲಿ ನಾವು ಇಲ್ಲಿಯೇ ಉಳಿಯಬಹುದು ಅಥವಾ ಆಧ್ಯಾತ್ಮಿಕ ಜಗತ್ತಿಗೆ ಮರಳಬಹುದು
660219-20 - Lecture BG Introduction - New York
ವಿವಿಧ ಭಾವಗಳಿವೆ. ನಾವು ಈಗಾಗಲೇ ವಿವರಿಸಿರುವಂತೆ, ಈ ಭೌತಿಕ ಪ್ರಕೃತಿಯು ಸಹ ಭಾವಗಳಲ್ಲಿ ಒಂದಾಗಿದೆ, ಪರಮ ಪುರುಷ ಭಗವಂತನ ಶಕ್ತಿಗಳಲ್ಲಿ ಒಂದರ ಪ್ರದರ್ಶನವಾಗಿದೆ. ವಿಷ್ಣು ಪುರಾಣದಲ್ಲಿ ಪರಮ ಪುರುಷ ಭಗವಂತನ ಒಟ್ಟು ಶಕ್ತಿಗಳನ್ನು ಸಂಕ್ಷೇಪಿಸಲಾಗಿದೆ.
ವಿಷ್ಣು-ಶಕ್ತಿಃ ಪರಾ ಪ್ರೋಕ್ತಾ ಕ್ಷೇತ್ರ-ಜ್ಞಾಖ್ಯಾ ತಥಾ ಪರಾ ಅವಿದ್ಯಾ-ಕರ್ಮ-ಸಂಜ್ಞಾನ್ಯಾ ತೃತೀಯಾ ಶಕ್ತಿರ್ ಇಷ್ಯತೇ (ಚೈ.ಚ ಮಧ್ಯ 6.154)
ಎಲ್ಲಾ ಶಕ್ತಿಗಳು, ಇವುಗಳ ಸಾಮರ್ಥ್ಯಗಳು..., ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೇ (ಚೈ.ಚ ಮಧ್ಯ 13.65, ತಾತ್ಪರ್ಯ). ಪರಮ ಪುರುಷ ಭಗವಂತನಿಗೆ ವಿವಿಧ ಶಕ್ತಿಗಳಿವೆ, ಅಸಂಖ್ಯಾತ ಶಕ್ತಿಗಳಿವೆ, ಅದನ್ನು ನಾವು ಗ್ರಹಿಸಲು ಸಾಧ್ಯವಿಲ್ಲ. ಆದರೆ ಮಹಾನ್ ವಿದ್ವಾಂಸರಾದ ಋಷಿಗಳು, ಮುಕ್ತ ಜೀವಿಗಳು, ಅವರು ಅಧ್ಯಯನ ಮಾಡಿದ್ದಾರೆ ಮತ್ತು ಅವರು ಸಂಪೂರ್ಣ ಶಕ್ತಿಗಳನ್ನು ಮೂರು ಭಾಗಗಳಾಗಿ, ಮೂರು ಶೀರ್ಷಿಕೆಗಳ ಅಡಿಯಲ್ಲಿ ಸಂಕ್ಷೇಪಿಸಿದ್ದಾರೆ. ಮೊದಲನೆಯದು... ಎಲ್ಲಾ ಶಕ್ತಿಗಳೂ ವಿಷ್ಣು-ಶಕ್ತಿಯಾಗಿವೆ. ಎಲ್ಲಾ ಶಕ್ತಿಗಳು, ಅವು ಭಗವಾನ್ ವಿಷ್ಣುವಿನ ವಿಭಿನ್ನ ಶಕ್ತಿಗಳಾಗಿವೆ. ಈಗ, ಆ ಶಕ್ತಿಯು ಪರಾ, ಅತೀಂದ್ರಿಯವಾದದ್ದು. ಮತ್ತು ಕ್ಷೇತ್ರ-ಜ್ಞಾಖ್ಯಾ ತಥಾ ಪರಾ, ಮತ್ತು ಜೀವಿಗಳು, ಕ್ಷೇತ್ರ-ಜ್ಞ, ಅವರು ಸಹ ಆ ಉನ್ನತ ಶಕ್ತಿಯ ಗುಂಪಿಗೆ ಸೇರಿದ್ದಾರೆ, ಅದನ್ನು ಭಗವದ್ಗೀತೆಯಲ್ಲೂ ದೃಢೀಕರಿಸಲಾಗಿದೆ. ನಾವು ಈಗಾಗಲೇ ವಿವರಿಸಿದ್ದೇವೆ. ಮತ್ತು ಇತರ ಶಕ್ತಿಗಳು, ಭೌತಿಕ ಶಕ್ತಿಯು ತೃತೀಯಾ ಕರ್ಮ-ಸಂಜ್ಞಾನ್ಯಾ (ಚೈ.ಚ ಮಧ್ಯ 6.154). ಇನ್ನೊಂದು ಶಕ್ತಿಯು ಅಜ್ಞಾನದ ಗುಣದಲ್ಲಿದೆ. ಅದು ಭೌತಿಕ ಶಕ್ತಿ. ಭೌತಿಕ ಶಕ್ತಿಯು ಸಹ ಭಗವದ್-(ಅಸ್ಪಷ್ಟ). ಮರಣದ ಸಮಯದಲ್ಲಿ, ನಾವು ಭೌತಿಕ ಶಕ್ತಿಯಲ್ಲಿ, ಅಥವಾ ಈ ಭೌತಿಕ ಜಗತ್ತಿನಲ್ಲಿ ಉಳಿಯಬಹುದು, ಅಥವಾ ನಾವು ಆಧ್ಯಾತ್ಮಿಕ ಜಗತ್ತಿಗೆ ವರ್ಗಾವಣೆಗೊಳ್ಳಬಹುದು. ಅದೇ ಮಾನದಂಡ. ಭಗವದ್ಗೀತೆಯು ಹೇಳುತ್ತದೆ,
- ಯಂ ಯಂ ವಾಪಿ ಸ್ಮರನ್ ಭಾವಂ
- ತ್ಯಜತ್ಯನ್ತೇ ಕಳೇವರಮ್
- ತಂ ತಮ್ ಏವೈತಿ ಕೌನ್ತೇಯ
- ಸದಾ ತದ್-ಭಾವ-ಭಾವಿತಃ
(ಭ.ಗೀ 8.6)
ಈಗ, ನಾವು ಈ ಭೌತಿಕ ಶಕ್ತಿಯ ಬಗ್ಗೆ ಅಥವಾ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಯೋಚಿಸಲು ಒಗ್ಗಿಕೊಂಡಿರುವುದರಿಂದ, ಆ ಆಲೋಚನೆಯನ್ನು ವರ್ಗಾಯಿಸುವುದು ಹೇಗೆ? ಭೌತಿಕ ಶಕ್ತಿಯ ಬಗೆಗಿನ ಆಲೋಚನೆಯನ್ನು, ಆಧ್ಯಾತ್ಮಿಕ ಶಕ್ತಿಯ ಬಗೆಗಿನ ಆಲೋಚನೆಗೆ ಹೇಗೆ ವರ್ಗಾಯಿಸಬಹುದು? ಆಧ್ಯಾತ್ಮಿಕ ಶಕ್ತಿಯಲ್ಲಿ ಯೋಚಿಸುವುದಕ್ಕಾಗಿ ವೈದಿಕ ಸಾಹಿತ್ಯಗಳಿವೆ. ಹೇಗೆ ಭೌತಿಕ ಶಕ್ತಿಗಳಲ್ಲಿ ಯೋಚಿಸುವುದಕ್ಕಾಗಿ, ಎಷ್ಟೋ ಸಾಹಿತ್ಯಗಳಿವೆಯೋ — ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಕಾದಂಬರಿಗಳು, ಕಟ್ಟುಕಥೆಗಳು, ಮತ್ತು ಇನ್ನು ಎಷ್ಟೋ ವಿಷಯಗಳಿವೆ. ಸಾಹಿತ್ಯಗಳಿಂದ ತುಂಬಿವೆ. ನಮ್ಮ ಆಲೋಚನೆಗಳು ಈ ಸಾಹಿತ್ಯಗಳಲ್ಲಿ ಮುಳುಗಿವೆ. ಅದೇ ರೀತಿ, ನಾವು ನಮ್ಮ ಆಲೋಚನೆಯನ್ನು ಆಧ್ಯಾತ್ಮಿಕ ವಾತಾವರಣಕ್ಕೆ ವರ್ಗಾಯಿಸಲು ಬಯಸಿದರೆ, ಆಗ ನಾವು ನಮ್ಮ ಓದುವ ಸಾಮರ್ಥ್ಯವನ್ನು ವೈದಿಕ ಸಾಹಿತ್ಯಕ್ಕೆ ವರ್ಗಾಯಿಸಬೇಕು. ಆದುದರಿಂದ, ವಿದ್ವಾಂಸರಾದ ಋಷಿಗಳು ಎಷ್ಟೋ ವೈದಿಕ ಸಾಹಿತ್ಯಗಳನ್ನು, ಪುರಾಣಗಳನ್ನು ರಚಿಸಿದರು. ಪುರಾಣಗಳು ಕಥೆಗಳಲ್ಲ. ಅವು ಐತಿಹಾಸಿಕ ದಾಖಲೆಗಳು. ಚೈತನ್ಯ-ಚರಿತಾಮೃತದಲ್ಲಿ ಈ ಕೆಳಗಿನಂತೆ ಓದಲಾಗುವ ಒಂದು ಶ್ಲೋಕವಿದೆ. ಅನಾದಿ-ಬಹಿರ್ಮುಖ ಜೀವ ಕೃಷ್ಣ ಭುಲಿ ಗೇಲ / ಅತಏವ ಕೃಷ್ಣ ವೇದ-ಪುರಾಣ ಕೈಲಾ (ಚೈ.ಚ ಮಧ್ಯ 20.117). ಅದೆಂದರೆ, ಈ ಮರೆಯುವ ಸ್ವಭಾವದ ಜೀವಿಗಳು, ಬದ್ಧ ಜೀವಿಗಳು, ಅವರು ಪರಮ ಪುರುಷ ಭಗವಂತನೊಂದಿಗಿನ ಸಂಬಂಧವನ್ನು ಮರೆತಿದ್ದಾರೆ, ಮತ್ತು ಅವರು ಭೌತಿಕ ಚಟುವಟಿಕೆಗಳ ಬಗ್ಗೆ ಯೋಚಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಮತ್ತು ಕೇವಲ ಅವರ ಆಲೋಚನಾ ಶಕ್ತಿಯನ್ನು ಆಧ್ಯಾತ್ಮಿಕ ಸಾಮರ್ಥ್ಯಕ್ಕೆ ವರ್ಗಾಯಿಸುವುದಕ್ಕಾಗಿ, ಕೃಷ್ಣ-ದ್ವೈಪಾಯನ ವ್ಯಾಸರು, ಅವರು ಎಷ್ಟೋ ವೈದಿಕ ಸಾಹಿತ್ಯಗಳನ್ನು ರಚಿಸಿದ್ದಾರೆ. ವೈದಿಕ ಸಾಹಿತ್ಯಗಳು ಎಂದರೆ ಮೊದಲು ಅವರು ವೇದಗಳನ್ನು ನಾಲ್ಕಾಗಿ ವಿಭಜಿಸಿದರು. ನಂತರ ಅವರು ಅವುಗಳನ್ನು ಪುರಾಣಗಳ ಮೂಲಕ ವಿವರಿಸಿದರು. ನಂತರ ಸ್ತ್ರೀ, ಶೂದ್ರ, ವೈಶ್ಯರಂತಹ ಅಸಮರ್ಥ ವ್ಯಕ್ತಿಗಳಿಗಾಗಿ, ಅವರು ಮಹಾಭಾರತವನ್ನು ರಚಿಸಿದರು. ಮತ್ತು ಮಹಾಭಾರತದಲ್ಲಿ ಅವರು ಈ ಭಗವದ್ಗೀತೆಯನ್ನು ಪರಿಚಯಿಸಿದರು. ನಂತರ ಮತ್ತೊಮ್ಮೆ ಅವರು ಸಂಪೂರ್ಣ ವೈದಿಕ ಸಾಹಿತ್ಯವನ್ನು ವೇದಾಂತ-ಸೂತ್ರದಲ್ಲಿ ಸಂಕ್ಷೇಪಿಸಿದರು. ಮತ್ತು ಭವಿಷ್ಯದ ಮಾರ್ಗದರ್ಶನಕ್ಕಾಗಿ ವೇದಾಂತ-ಸೂತ್ರಕ್ಕೆ, ಅವರು ತಾವೇ ಸ್ವತಃ ಒಂದು ನೈಸರ್ಗಿಕ ವ್ಯಾಖ್ಯಾನವನ್ನು ರಚಿಸಿದರು, ಅದನ್ನೇ ಶ್ರೀಮದ್-ಭಾಗವತಂ ಎಂದು ಕರೆಯಲಾಗುತ್ತದೆ.