Jump to content

KN/Prabhupada 0244 - ಎಲ್ಲವೂ ಭಗವಂತನಿಗೆ ಸೇರಿದ್ದು ಎಂಬುದು ನಮ್ಮ ತತ್ವವಾಗಿದೆ

From Vanipedia


Lecture on BG 2.9 -- London, August 15, 1973

ಮೊನ್ನೆಯಷ್ಟೇ ಪ್ಯಾರಿಸ್‌ನಲ್ಲಿ, ಸೋಷಿಯಲಿಸ್ಟ್ ಪ್ರೆಸ್‌ನ ವರದಿಗಾರನೊಬ್ಬ ನನ್ನ ಬಳಿಗೆ ಬಂದನು. ನಾನು ಅವನಿಗೆ ತಿಳಿಸಿದೆ, "ಎಲ್ಲವೂ ಭಗವಂತನಿಗೆ ಸೇರಿದ್ದು ಎಂಬುದು ನಮ್ಮ ತತ್ವವಾಗಿದೆ." ಕೃಷ್ಣನು ಹೇಳುತ್ತಾನೆ, ಭೋಕ್ತಾರಂ ಯಜ್ಞ-ತಪಸಾಂ ಸರ್ವ-ಲೋಕ-ಮಹೇಶ್ವರಮ್ (ಭ.ಗೀ 5.29). "ನಾನೇ ಭೋಗಿಸುವವನು, ಭೋಕ್ತ." ಭೋಕ್ತ ಎಂದರೆ ಭೋಗಿಸುವವನು. ಭೋಕ್ತಾರಂ ಯಜ್ಞ-ತಪಸಾಂ. ಹೇಗೆಂದರೆ ಈ ದೇಹವು ಕೆಲಸ ಮಾಡುತ್ತಿದೆ. ಜೀವನವನ್ನು ಆನಂದಿಸಲು ಇಡೀ ದೇಹವು ಕೆಲಸ ಮಾಡುತ್ತಿದೆ, ಪ್ರತಿಯೊಬ್ಬರದ್ದೂ ; ಆದರೆ ಆನಂದವು ಎಲ್ಲಿಂದ ಪ್ರಾರಂಭವಾಗುತ್ತದೆ? ಆನಂದವು ಹೊಟ್ಟೆಯಿಂದ ಪ್ರಾರಂಭವಾಗುತ್ತದೆ. ನೀವು ಹೊಟ್ಟೆಗೆ ಸಾಕಷ್ಟು, ರುಚಿಕರವಾದ ಆಹಾರವನ್ನು ನೀಡಬೇಕು. ಸಾಕಷ್ಟು ಶಕ್ತಿ ಇದ್ದರೆ, ನಾವು ಜೀರ್ಣಿಸಿಕೊಳ್ಳಬಹುದು. ಸಾಕಷ್ಟು ಶಕ್ತಿ ಇದ್ದರೆ, ಆಗ ಉಳಿದೆಲ್ಲಾ ಇಂದ್ರಿಯಗಳೂ ಬಲಶಾಲಿಯಾಗುತ್ತವೆ. ಆಗ ನೀವು ಇಂದ್ರಿಯ ತೃಪ್ತಿಯನ್ನು ಆನಂದಿಸಬಹುದು. ಇಲ್ಲದಿದ್ದರೆ, ಅದು ಸಾಧ್ಯವಿಲ್ಲ. ನಿಮಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ.... ಹೇಗೆಂದರೆ, ನಾವು ಈಗ ವಯಸ್ಸಾದವರು. ನಮಗೆ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ, ಅಲ್ಲಿ ಇಂದ್ರಿಯ ಭೋಗದ ಪ್ರಶ್ನೆಯೇ ಇಲ್ಲ. ಇಂದ್ರಿಯ ಭೋಗವು ಹೊಟ್ಟೆಯಿಂದ ಪ್ರಾರಂಭವಾಗುತ್ತದೆ. ಸಾಕಷ್ಟು ನೀರಿದ್ದರೆ, ಮರದ ಸಮೃದ್ಧವಾದ ಬೆಳವಣಿಗೆಯು ಬೇರಿನಿಂದ ಪ್ರಾರಂಭವಾಗುತ್ತದೆ. ಆದುದರಿಂದಲೇ, ಮರಗಳನ್ನು 'ಪಾದಪ' ಎಂದು ಕರೆಯಲಾಗುತ್ತದೆ. ಅವು ಕಾಲುಗಳಿಂದ, ಅಂದರೆ ಬೇರುಗಳಿಂದ ನೀರನ್ನು ಕುಡಿಯುತ್ತವೆ, ತಲೆಗಳಿಂದಲ್ಲ. ಹೇಗೆಂದರೆ ನಾವು ತಲೆಯಿಂದ ತಿನ್ನುವಂತೆ. ವಿಭಿನ್ನವಾದ ವ್ಯವಸ್ಥೆಗಳಿವೆ. ನಾವು ಬಾಯಿಯಿಂದ ತಿನ್ನುವ ಹಾಗೆ, ಮರಗಳು ತಮ್ಮ ಕಾಲುಗಳಿಂದ ತಿನ್ನುತ್ತವೆ. ಆದರೆ ತಿನ್ನಲೇಬೇಕು. ಆಹಾರ-ನಿದ್ರಾ-ಭಯ-ಮೈಥುನ. ತಿನ್ನುವುದು ಇದ್ದೇ ಇದೆ; ನೀವು ನಿಮ್ಮ ಕಾಲುಗಳ ಮೂಲಕ ಅಥವಾ ಬಾಯಿಯ ಮೂಲಕ ಅಥವಾ ಕೈಗಳ ಮೂಲಕ ತಿನ್ನಬಹುದು. ಆದರೆ ಕೃಷ್ಣನ ವಿಷಯಕ್ಕೆ ಬಂದರೆ, ಆತನು ಎಲ್ಲಿಂದಲಾದರೂ ತಿನ್ನಬಲ್ಲನು. ಆತನು ಕೈಗಳಿಂದ, ಕಾಲುಗಳಿಂದ, ಕಣ್ಣುಗಳಿಂದ, ಕಿವಿಗಳಿಂದ, ಎಲ್ಲಿಂದಲಾದರೂ ತಿನ್ನಬಲ್ಲನು. ಏಕೆಂದರೆ ಆತನು ಸಂಪೂರ್ಣವಾಗಿ ಆಧ್ಯಾತ್ಮಿಕನಾಗಿದ್ದಾನೆ. ಆತನ ತಲೆಗಳು, ಕಾಲುಗಳು, ಕಿವಿಗಳು, ಮತ್ತು ಕಣ್ಣುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅದನ್ನು ಬ್ರಹ್ಮ-ಸಂಹಿತೆಯಲ್ಲಿ ಹೇಳಲಾಗಿದೆ,

ಅಂಗಾನಿ ಯಸ್ಯ ಸಕಲೇಂದ್ರಿಯ-ವೃತ್ತಿಮಂತಿ
ಪಶ್ಯಂತಿ ಪಾಂತಿ ಕಲಯಂತಿ ಚಿರಂ ಜಗಂತಿ
ಆನಂದ-ಚಿನ್ಮಯ-ಸದುಜ್ಜ್ವಲ-ವಿಗ್ರಹಸ್ಯ
ಗೋವಿಂದಮ್ ಆದಿ-ಪುರುಷಂ ತಮ್ ಅಹಂ ಭಜಾಮಿ
(ಬ್ರಹ್ಮ ಸಂಹಿತ 5.32)

ಈ ದೇಹದಲ್ಲಿ ನಮ್ಮ ಇಂದ್ರಿಯ ಭೋಗವು ಹೊಟ್ಟೆಯಿಂದ ಪ್ರಾರಂಭವಾಗಬೇಕು. ಹೇಗೆ ಮರವು ಬೇರಿನಿಂದ ಸಮೃದ್ಧವಾಗಿ ಬೆಳೆಯಲು ಪ್ರಾರಂಭಿಸುತ್ತದೆಯೋ, ಅದೇ ರೀತಿ, ಕೃಷ್ಣನು ಎಲ್ಲದರ ಮೂಲವಾಗಿದ್ದಾನೆ, ಜನ್ಮಾದ್ಯಸ್ಯ ಯತಃ (ಶ್ರೀ. ಭಾ 1.1.1). ಬೇರು. ಆದುದರಿಂದ, ಕೃಷ್ಣಪ್ರಜ್ಞೆಯಿಲ್ಲದೆ, ಕೃಷ್ಣನನ್ನು ತೃಪ್ತಿಪಡಿಸದೆ, ನೀವು ಸಂತೋಷವಾಗಿರಲು ಸಾಧ್ಯವಿಲ್ಲ. ಇದೇ ವ್ಯವಸ್ಥೆ. ಆದರೆ ಕೃಷ್ಣನು ಹೇಗೆ ತೃಪ್ತನಾಗುತ್ತಾನೆ? ಕೃಷ್ಣನು ಇದರಿಂದ ತೃಪ್ತನಾಗುತ್ತಾನೆ... ನಾವೆಲ್ಲರೂ ಕೃಷ್ಣನ ಮಕ್ಕಳು, ಭಗವಂತನ ಮಕ್ಕಳು. ಪ್ರತಿಯೊಂದೂ ಕೃಷ್ಣನ ಆಸ್ತಿ. ಇವು ವಾಸ್ತವಾಂಶಗಳು. ಈಗ, ನಾವು ಕೃಷ್ಣನ ಪ್ರಸಾದವನ್ನು ಸ್ವೀಕರಿಸುತ್ತಾ ಆನಂದಿಸಬಹುದು, ಏಕೆಂದರೆ ಆತನೇ ಮಾಲೀಕ, ಭೋಕ್ತ, ಭೋಗಿಸುವವನು. ಆದುದರಿಂದ, ಪ್ರತಿಯೊಂದನ್ನೂ ಮೊದಲು ಕೃಷ್ಣನಿಗೆ ನೀಡಬೇಕು, ಮತ್ತು ಆನಂತರ ನೀವು ಪ್ರಸಾದವನ್ನು ಸ್ವೀಕರಿಸಬೇಕು. ಅದು ನಿಮ್ಮನ್ನು ಸಂತೋಷಪಡಿಸುತ್ತದೆ. ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಭುಂಜತೇ ತೇ ತ್ವಘಂ ಪಾಪಂ ಯೇ ಪಚಂತ್ಯಾತ್ಮ-ಕಾರಣಾತ್ (ಭ.ಗೀ 3.13): "ಯಾರು ಕೇವಲ ತಾವೇ ತಿನ್ನಲು ಅಡುಗೆ ಮಾಡುತ್ತಾರೋ, ಅವರು ಕೇವಲ ಪಾಪವನ್ನೇ ತಿನ್ನುತ್ತಿದ್ದಾರೆ." ಭುಂಜತೇ ತೇ ತ್ವಘಂ ಪಾಪಂ ಯೇ ಪಚಂತ್ಯಾತ್ಮ... ಯಜ್ಞಾರ್ಥಾತ್ ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮ... ಪ್ರತಿಯೊಂದನ್ನೂ ಕೃಷ್ಣನಿಗಾಗಿ ಮಾಡಬೇಕು, ನಿಮ್ಮ ಊಟವಾದರೂ ಸರಿ, ಯಾವುದಾದರೂ ಸರಿ. ಎಲ್ಲಾ ಇಂದ್ರಿಯ ಭೋಗವನ್ನು, ನೀವು ಆನಂದಿಸಬಹುದು. ಆದರೆ ಕೃಷ್ಣನು ಭೋಗಿಸಿದ ನಂತರ. ಆಮೇಲೆ ನೀವು ತಿನ್ನಬಹುದು. ಆದುದರಿಂದ, ಕೃಷ್ಣನ ಹೆಸರು ಹೃಷೀಕೇಶ. ಆತನು ಒಡೆಯನು. ಇಂದ್ರಿಯಗಳ ಒಡೆಯ. ನಿಮ್ಮಷ್ಟಕ್ಕೆ ನೀವೇ ಸ್ವತಃ ನಿಮ್ಮ ಇಂದ್ರಿಯಗಳನ್ನು ಆನಂದಿಸಲಾರಿರಿ. ಹೇಗೆಂದರೆ, ಒಬ್ಬ ಸೇವಕನ ಹಾಗೆ. ಒಬ್ಬ ಸೇವಕನು ಆನಂದಿಸಲಾರನು. ಅಡುಗೆಮನೆಯಲ್ಲಿ ಅಡುಗೆಯವನು ಅತ್ಯಂತ ರುಚಿಕರವಾದ ಆಹಾರವನ್ನು ಬೇಯಿಸುತ್ತಿರುತ್ತಾನೆ, ಆದರೆ ಅವನು ಪ್ರಾರಂಭದಲ್ಲೇ ತಿನ್ನುವಂತಿಲ್ಲ. ಅದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅವನನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ಯಜಮಾನನು ಮೊದಲು ತಿನ್ನಬೇಕು, ಮತ್ತು ಆನಂತರ ಅವರು ಎಲ್ಲಾ ರುಚಿಕರವಾದ ಆಹಾರವನ್ನು ಆನಂದಿಸಬಹುದು.