KN/721129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೈದರಾಬಾದ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಆಧುನಿಕ ನಾಗರಿಕತೆಯು ನಾವು ಎಷ್ಟು ಚನ್ನಾಗಿ ತಿನ್ನಬಹುದು, ಎಷ್ಟು ಚನ್ನಾಗಿ ನಿದ್ರಿಸಬಹುದು, ಎಷ್ಟು ಚನ್ನಾಗಿ ಮೈಥುನದಲ್ಲಿ ತೊಡಗಬಹುದು ಮತ್ತು ಎಷ್ಟು ಚನ್ನಾಗಿ ರಕ್ಷಿಸಿಕೊಳ್ಳಬಹುದು ಎಂಬುದರ ಸುತ್ತಲೂ ತಿರುಗುತ್ತಿದೆ. ಈ ನಾಲ್ಕು ಸೂತ್ರಗಳನ್ನು ಮಾತ್ರವೇ ಕಲಿಸಲಾಗುತ್ತಿದೆ.
ಅವರಿಗೆ ಆತ್ಮವೆಂದರೇನು, ಭಗವಂತನೆಂದರೇನು ಅಥವಾ ಭಗವಂತನೊಂದಿಗೆ ಆತ್ಮಕ್ಕಿರುವ ಸಂಬಂಧವೇನು ಎಂಬುದರ ಕುರಿತು ಯಾವುದೇ ಕಲ್ಪನೆಯಿಲ್ಲ. ಆದ್ದರಿಂದ ಈ ರೀತಿಯ ನಾಗರಿಕತೆಯು ಬೆಳೆಯುತ್ತಿದೆ. ನಾಲ್ಕು ಲಕ್ಷ ವರ್ಷಗಳ ನಂತರ ಇದು ಎಷ್ಟರಮಟ್ಟಿಗೆ ಹೆಚ್ಚಾಗಬಹುದು ಎಂಬುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಕಲಿಯುಗವು ಪ್ರಾರಂಭವಾಗಿ ಕೇವಲ ಐದು ಸಾವಿರ ವರ್ಷಗಳು ಕಳೆದಿವೆಯಷ್ಟೇ. ಈ ಐದು ಸಾವಿರ ವರ್ಷಗಳಲ್ಲಿಯೇ ನಾವು ಇಷ್ಟೊಂದು ಪತನವನ್ನು ಕಂಡಿದ್ದೇವೆ, ನಾಗರಿಕತೆಯ ಪ್ರಗತಿಯ ಮುಸುಕಿನಲ್ಲಿ ಮಾನವರು ಮಾಯೆಯಿಂದ ಭ್ರಮೆಗೊಳಗಾಗಿದ್ದಾರೆ. ಇದೇ ಮಾಯೆ. ದಿನಗಳು ಕಳೆದಂತೆ, ನಾವು ಮತ್ತಷ್ಟು ಭ್ರಮೆಗೊಳಗಾಗುತ್ತೇವೆ. ಆದ್ದರಿಂದ ಭಗವಂತನ ಬಗ್ಗೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೇ ಉಳಿಯುವುದಿಲ್ಲ. ಆ ಸಮಯದಲ್ಲಿ, ಈ ಎಲ್ಲಾ ಜನಸಂಖ್ಯೆಯ ಗಂಟಲನ್ನು ಕೊಯ್ದು ಅವರನ್ನೆಲ್ಲಾ ವಿನಾಶ ಮಾಡಲು ಭಗವಂತನು ಬರುತ್ತಾನೆ. ಅದೇ 'ಕಲ್ಕಿ ಅವತಾರ'." |
| 721129 - ಉಪನ್ಯಾಸ BG 02.25 - ಹೈದರಾಬಾದ್ |