KN/721111 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಮಗುವು ಹಟ ಮಾಡುತ್ತಿದೆ: 'ಅಪ್ಪಾ, ನನಗೆ ಇದು ಬೇಕು'. ತಂದೆ ಹೇಳುತ್ತಾನೆ, 'ಬೇಡ, ನೀನು ಅದನ್ನು ತಗೋಬೇಡ'. 'ನಾನು ಅದನ್ನು ಮುಟ್ಟುತ್ತೇನೆ. ನಾನು ಬೆಂಕಿಯನ್ನು ಮುಟ್ಟುತ್ತೇನೆ'. ತಂದೆ ಹೇಳುತ್ತಾನೆ, 'ಬೇಡ, ಅದನ್ನು ಮುಟ್ಟಬೇಡ'. ಆದರೆ ಮಗುವು ಹಟ ಹಿಡಿದು ಅಳುತ್ತಿರುತ್ತದೆ, ಹಾಗಾಗಿ ತಂದೆ ಹೇಳುತ್ತಾನೆ, 'ಸರಿ, ನೀನು ಮುಟ್ಟು'.
ಅದೇ ರೀತಿ, ನಾವು ನಮ್ಮ ಸ್ವಂತ ಅದೃಷ್ಟ ಮತ್ತು ದುರದೃಷ್ಟಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ. 'ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ ತಥೈವ ಭಜಾಮ್ಯಹಮ್' (ಭಗವದ್ಗೀತೆ ೪.೧೧)(BG 4.11). ತಂದೆಯು ನಾವು ಬೇರೊಂದನ್ನು ಮಾಡಬೇಕೆಂದು ಬಯಸುತ್ತಾನೆ, ಆದರೆ ನಾವು ತಂದೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಂದನ್ನೇ ಮಾಡಲು ಬಯಸುತ್ತೇವೆ. ಅದೇ ರೀತಿ, ನಮ್ಮಲ್ಲಿ ಪ್ರತಿಯೊಬ್ಬರೂ ತನಗೆ ಶರಣಾಗಬೇಕೆಂದು ಮತ್ತು ತನ್ನ ನಿರ್ದೇಶನದಂತೆ ಕೆಲಸ ಮಾಡಬೇಕೆಂದು ಕೃಷ್ಣನು ಬಯಸುತ್ತಾನೆ, ಆದರೆ ನಾವು ಅವನ ಇಚ್ಛೆಗೆ ವಿರುದ್ಧವಾಗಿ ಮಾಡಲು ಬಯಸುತ್ತೇವೆ. ಆದ್ದರಿಂದ ನಾವೇ ನಮ್ಮ ಅದೃಷ್ಟ ಮತ್ತು ದುರದೃಷ್ಟಗಳನ್ನು ಸೃಷ್ಟಿಸಿಕೊಳ್ಳುತ್ತೇವೆ." |
| 721111 - ಉಪನ್ಯಾಸ SB 01.02.32 - ವೃಂದಾವನ |