Jump to content

KN/721105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
""ಭೇಜಿರೇ ಮುನಯಃ ಅಥಾಗ್ರೇ ಭಗವಂತಮ್ ಅಧೋಕ್ಷಜಮ್" (ಶ್ರೀಮದ್ಭಾಗವತ ೧.೨.೨೫)(SB 1.2.25). ಅಂತಿಮವಾಗಿ ಪರಮ ಸತ್ಯವು ನಿರಾಕಾರವಾದುದು ಎಂಬ ಕೆಲವು ಸಿದ್ಧಾಂತಗಳಿವೆ—ಆದರೆ ಅದು ಸತ್ಯವಲ್ಲ. ಆದರೆ ಇಲ್ಲಿ ನಮಗೆ ಕಂಡುಬರುವುದೇನೆಂದರೆ; 'ಅಗ್ರೇ', ಎಂದರೆ ಆರಂಭದಲ್ಲಿ, ಸೃಷ್ಟಿಯ ನಂತರ, ಎಲ್ಲಾ ಮುನಿಗಳೂ... ಮೊದಲಿಗೆ, ಬ್ರಹ್ಮದೇವನಿದ್ದನು.

ತದನಂತರ ಅವನು ಅನೇಕ ಸಾಧು-ಸಂತರು ಮತ್ತು ಮರೀಚಿ ಮುಂತಾದ ಮಹರ್ಷಿಗಳನ್ನು ಸೃಷ್ಟಿಸಿದನು. ಮತ್ತು ಅವರೂ ಸಹ ತಮ್ಮನ್ನು ಪರಮ ಪುರುಷ ಭಗವಂತನ ಆರಾಧನೆಯಲ್ಲಿ ತೊಡಗಿಸಿಕೊಂಡರು.

ಆರಂಭದಿಂದಲೂ ಅದು ನಿರಾಕಾರವಾಗಿರಲಿಲ್ಲ; "ಭೇಜಿರೇ ಮುನಯಃ ಅಥ ಅಗ್ರೇ" - ತೀರಾ ಆರಂಭದಿಂದಲೂ. "ಭಗವಂತಮ್ ಅಧೋಕ್ಷಜಮ್". 'ಅಧೋಕ್ಷಜ' ಎಂಬುದನ್ನು ನಾವು ಹಲವು ಬಾರಿ ವಿವರಿಸಿದ್ದೇವೆ: 'ನಮ್ಮ ಇಂದ್ರಿಯ ಗೋಚರತೆಗೆ/ಗ್ರಹಿಕೆಗೆ ಮೀರಿದವನು'.

ಪರಮ ಸತ್ಯವು ಒಬ್ಬ ವ್ಯಕ್ತಿ (ಸಾಕಾರ) ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ."

721105 - ಉಪನ್ಯಾಸ SB 01.02.25 - ವೃಂದಾವನ