KN/721027 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| ಒಬ್ಬ ಭಕ್ತನು ಚೈತನ್ಯ ಮಹಾಪ್ರಭುಗಳಲ್ಲಿ ಹೀಗೆ ವಿನಂತಿಸಿಕೊಂಡನು, "ನನ್ನ ಪ್ರಭುವೇ, ನೀವು ಬಂದಿದ್ದೀರಿ. ದಯವಿಟ್ಟು ಈ ಬ್ರಹ್ಮಾಂಡದ ಎಲ್ಲಾ ಜನರನ್ನು ಉದ್ಧಾರ ಮಾಡಿ. ಅವರು ಪಾಪಿಗಳಾಗಿದ್ದರೆ, ಅವರ ಎಲ್ಲಾ ಪಾಪಗಳನ್ನು ನಾನು ಸ್ವೀಕರಿಸುತ್ತೇನೆ, ಆದರೆ ಅವರು ಮುಕ್ತಿ ಹೊಂದಲಿ." ಇದು ವೈಷ್ಣವ ತತ್ತ್ವಶಾಸ್ತ್ರ.
"ಭಗವಂತನ ಕೃಪೆಯಿಂದ ಇತರರು ಉದ್ಧಾರವಾಗಲಿ; ನಾನು ಬೇಕಾದರೆ ನರಕದಲ್ಲಿ ಕೊಳೆಯಲಿ, ಅದರಿಂದೇನೂ ತೊಂದರೆಯಿಲ್ಲ." ಎನ್ನುವುದೇ ಹೊರತು, "ಮೊದಲು ನಾನು ಸ್ವರ್ಗಕ್ಕೆ ಹೋಗುತ್ತೇನೆ, ಇತರರು ಕೊಳೆಯಲಿ" ಎಂಬುದಲ್ಲ. ಇದು ವೈಷ್ಣವ ತತ್ತ್ವಶಾಸ್ತ್ರವಲ್ಲ. ವೈಷ್ಣವ ತತ್ತ್ವಶಾಸ್ತ್ರವೆಂದರೆ, "ನಾನು ನರಕದಲ್ಲಿ ಕೊಳೆಯಬಹುದು, ಆದರೆ ಇತರರು ಉದ್ಧಾರವಾಗಬೇಕು." 'ಪತಿತಾನಾಂ ಪಾವನೇಭ್ಯೋ ವೈಷ್ಣವೇಭ್ಯೋ ನಮೋ ನಮಃ' (ಮಂಗಳಾಚರಣೆ ೯). ವೈಷ್ಣವನು ಎಂದರೆ ಪತಿತರಾದ ಎಲ್ಲಾ ಆತ್ಮಗಳನ್ನು ಉದ್ಧರಿಸುವುದಕ್ಕಾಗಿಯೇ ಇರುವವನು. |
| 721027 - ಉಪನ್ಯಾಸ SB 01.02.16 - ವೃಂದಾವನ |