KN/721024 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ನಮ್ಮಲ್ಲಿರುವ ಪ್ರೀತಿಯ ಭಾವನೆಯು ಪರಮ ಪುರುಷೋತ್ತಮನಾದ ಭಗವಂತನನ್ನು ತಲುಪುವವರೆಗೂ ಸಂಪೂರ್ಣ ತೃಪ್ತಿಯನ್ನು ಪಡೆಯುವುದಿಲ್ಲ. ಇದೇ 'ಕೃಷ್ಣ ಪ್ರಜ್ಞೆ'ಯ ಆಂದೋಲನ.
ನಾವು ಪ್ರೀತಿಸುತ್ತೇವೆ; ಪ್ರೀತಿಸುವ ಗುಣವು ನಮ್ಮಲ್ಲಿ ಸಹಜವಾಗಿಯೇ ಇದೆ. ನಮಗೆ ಕುಟುಂಬವಿಲ್ಲದಿದ್ದರೂ, ಪ್ರೀತಿಸಲು ನಾವು ಕೆಲವೊಮ್ಮೆ ಸಾಕುಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳನ್ನು ಸಾಕುತ್ತೇವೆ. ಹೀಗೆ, ಸ್ವಭಾವತಃ ನಾವು ಬೇರೊಬ್ಬರನ್ನು ಪ್ರೀತಿಸಲು ಬಯಸುತ್ತೇವೆ; ಆ 'ಬೇರೊಬ್ಬರು' ಬೇರೆ ಯಾರೂ ಅಲ್ಲ, ಸ್ವತಃ ಕೃಷ್ಣನೇ ಆಗಿದ್ದಾನೆ. ವಾಸ್ತವವಾಗಿ ನಾವು ಕೃಷ್ಣನನ್ನು ಪ್ರೀತಿಸಲು ಬಯಸುತ್ತೇವೆ, ಆದರೆ ಕೃಷ್ಣನ ಬಗೆಗಿನ ಜ್ಞಾನವಿಲ್ಲದೆ ಅಥವಾ ಕೃಷ್ಣ ಪ್ರಜ್ಞೆಯಿಲ್ಲದೆ, ನಮ್ಮ ಪ್ರೀತಿಯ ಭಾವನೆಯು ಒಂದು ನಿರ್ದಿಷ್ಟ ಪರಿಧಿಗೆ ಮಾತ್ರ ಸೀಮಿತವಾಗಿರುತ್ತದೆ. ಆದ್ದರಿಂದಲೇ ನಮಗೆ ತೃಪ್ತಿ ಸಿಗುವುದಿಲ್ಲ. 'ನಿತ್ಯ-ಸಿದ್ಧ ಕೃಷ್ಣ-ಭಕ್ತಿ' (ಚೈತನ್ಯ-ಚರಿತಾಮೃತ, ಮಧ್ಯ-ಲೀಲಾ 22.107) (CC Madhya 22.107)- ಕೃಷ್ಣನನ್ನು ಪ್ರೀತಿಸುವ ಆ ಪ್ರೀತಿಯ ಭಾವನೆಯು ನಮ್ಮಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ." |
| 721024 - ಉಪನ್ಯಾಸ NOD - ವೃಂದಾವನ |