Jump to content

KN/720929 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಭೌತಿಕ ಸೃಷ್ಟಿಯ ಅಗತ್ಯವಿರಲಿಲ್ಲ. ಕೆಲವರು, 'ದೇವರು ಈ ದುಃಖಮಯ ಜಗತ್ತನ್ನು ಏಕೆ ಸೃಷ್ಟಿಸಿದನು?' ಎಂದು ಪ್ರಶ್ನಿಸುತ್ತಾರೆ. ಆದರೆ ನೀವೇ ಅದನ್ನು ಬಯಸಿದ್ದೀರಿ; ಆದ್ದರಿಂದ ದೇವರು ಅದನ್ನು ನಿಮಗೆ ನೀಡಿದ್ದಾನೆ. 'ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್‍ಯಹಮ್' (ಭಗವದ್ಗೀತೆ 4.11)(BG 4.11). ಕೃಷ್ಣನು ಅತ್ಯಂತ ದಯಾಮಯನು.

ಅವನು ಹೇಳುತ್ತಾನೆ: 'ನೀವು ಅಂತಹದ್ದನ್ನೇ ಬಯಸಿದ್ದೀರಿ'. ಇದಕ್ಕೊಂದು ಉದಾಹರಣೆಯೆಂದರೆ ಕಾರಾಗೃಹ. ಕಾರಾಗೃಹಕ್ಕೆ ಬರುವಂತೆ ಸರ್ಕಾರವು, 'ಸಹೋದರ-ಸಹೋದರಿಯರೇ, ದಯವಿಟ್ಟು ಇಲ್ಲಿಗೆ ಬನ್ನಿ' ಎಂದು ಪ್ರಚಾರ ಮಾಡುವುದಿಲ್ಲ. ಆದರೂ ನೀವು ಅಲ್ಲಿಗೆ ಹೋಗುತ್ತೀರಿ.

ಅದೇ ರೀತಿ, ಈ ಭೌತಿಕ ಜಗತ್ತನ್ನು ನಿಮಗಾಗಿ ಸೃಷ್ಟಿಸಲಾಗಿದೆ, ಏಕೆಂದರೆ ನೀವು ಅದನ್ನು ಬಯಸಿದ್ದೀರಿ. ಮತ್ತು ಇಲ್ಲಿ ನೀವು... ಕಾರಾಗೃಹದಲ್ಲಿ ಅತ್ಯಂತ ಆರಾಮದಾಯಕ ಜೀವನವನ್ನು ನಿರೀಕ್ಷಿಸಲು ಸಾಧ್ಯವಿಲ್ಲದಂತೆಯೇ, ಇಲ್ಲೂ ಸಹ ಅದನ್ನು ನಿರೀಕ್ಷಿಸಲಾಗುವುದಿಲ್ಲ... ಏಕೆಂದರೆ ಕೊನೆಗೂ ಅದು ಕಾರಾಗೃಹವೇ ಆಗಿರುತ್ತದೆ. ಅಲ್ಲಿ ಕಷ್ಟ-ಕಾರ್ಪಣ್ಯಗಳು ಇರಲೇಬೇಕು, ಆಗ ಮಾತ್ರ ನೀವು ಮತ್ತೆ ಅಲ್ಲಿಗೆ ಹೋಗದಿರಲು ಸಾಧ್ಯವಾಗುತ್ತದೆ."

720929 - ಉಪನ್ಯಾಸ SB 01.03.24 - ಲಾಸ್ ಎಂಜಲೀಸ್