KN/720920 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| ಪ್ರಭುಪಾದರು: ಕರ್ಮಕ್ಕನುಗುಣವಾಗಿ, ಜೀವಿಗಳಲ್ಲಿ ವಿವಿಧ ಜಾತಿಗಳು ಅಥವಾ ರೂಪಗಳಿವೆ, ಆದರೆ ಅವೆಲ್ಲವೂ ಬದುಕಲು ಅಗತ್ಯವಾದ ಸೌಲಭ್ಯಗಳನ್ನು ಹೊಂದಿವೆ. ಅದು ದೇವರ ಸೃಷ್ಟಿ. 'ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ-ಚರಾಚರಮ್' (ಭಗವದ್ಗೀತೆ 9.10)(BG 9.10) - ಅಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ. ಉದಾಹರಣೆಗೆ, ಒಂದು ಜೀವಿಯು ಸಮುದ್ರದಲ್ಲಿ ಅತ್ಯಂತ ಉತ್ಸಾಹದಿಂದ ಈಜಾಡಲು ದೇಹವನ್ನು ಬಯಸಿದರೆ, ಅದಕ್ಕೆ ಮೀನಿನ ದೇಹ ಸಿಗುತ್ತದೆ. ಆಗ ಅದು ಅಲ್ಲಿ ಶಾಂತಿಯುತವಾಗಿ ಜೀವಿಸುತ್ತದೆ. ಅದು ದೇವರ ಕೃಪೆ. ನೀವು ಆ 'ಸರ್ಫ್'... ಸಮುದ್ರದಲ್ಲಿ ಬಳಸುವ ಆ ಸಾಧನ ಯಾವುದು?
ಭಕ್ತ: ಸರ್ಫ್‌ಬೋರ್ಡ್. ಪ್ರಭುಪಾದರು: ಸರ್ಫ್‌ಬೋರ್ಡ್? ಹೌದು. (ನಗು) ಹಾಗಾಗಿ, ನೀವು ಅಂತಹ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡರೆ - "ನಾನು ಹಗಲು-ರಾತ್ರಿ ಈ ಕ್ರೀಡೆಯನ್ನು ಆನಂದಿಸುತ್ತಾ ಹೇಗೆ ಈಜಾಡಬಹುದು?" ಎಂದು ಯೋಚಿಸಿದರೆ - ಆಗ ಕೃಷ್ಣ ನಿಮಗೆ ಮೀನಿನ ದೇಹವನ್ನು ನೀಡುತ್ತಾನೆ (ನಗು). ಹೌದು. ಅವನು ಬಹಳ ದಯಾಮಯಿ. ಆಗ ನೀವು ಸಮುದ್ರದಲ್ಲಿ ಯಾವುದೇ ತೊಂದರೆಯಿಲ್ಲದೆ, ಸದಾ ಈಜಾಡುತ್ತಾ ಸುಂದರವಾಗಿ ಜೀವಿಸುತ್ತೀರಿ. ಪ್ರತಿಯೊಂದು ಜೀವಿಯ ವಿಷಯದಲ್ಲೂ ಹೀಗೆಯೇ. ನಿರ್ದಿಷ್ಟ ರೀತಿಯ ಚಟುವಟಿಕೆಗಳ ಕಡೆಗೆ ನಿಮ್ಮ ಒಲವು ಹೆಚ್ಚಾದಂತೆ, ಪ್ರಕೃತಿಯು ತಕ್ಷಣವೇ ಸಿದ್ಧವಿರುತ್ತದೆ: 'ಈ ದೇಹವನ್ನು ತೆಗೆದುಕೊ. ನೀನು ಏಕೆ ಚಿಂತಿಸುತ್ತಿದ್ದೀಯೆ?'. ಅದೇ ರೀತಿ, ಕೃಷ್ಣನಂತಹ ದೇಹವನ್ನು ಪಡೆಯಲು ನೀವು ತೀವ್ರವಾಗಿ ಬಯಸಿದರೆ, ಅದೂ ಕೂಡ ಸಿದ್ಧವಿರುತ್ತದೆ. ಈಗ ಆಯ್ಕೆ ನಿಮ್ಮದು. |
| 720920 - ಉಪನ್ಯಾಸ SB 01.03.15 - ಲಾಸ್ ಎಂಜಲೀಸ್ |