Jump to content

KN/700518b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಂದು ವೇಳೆ ನೀವು ನಿಮ್ಮ ಕಣ್ಣುಗಳಿಗೆ ದೇವರೆಡೆಗಿನ ಪ್ರೀತಿಯೆಂಬ ಅಂಜನವನ್ನು ಹಚ್ಚಿಕೊಂಡರೆ, ಆಗ ನೀವು ಯಾವಾಗಲೂ ದೇವರನ್ನು ಕಾಣುವಿರಿ. 'ಸಂತಃ ಸದೈವ ಹೃದಯೇಷು ವಿಲೋಕಯಂತಿ' - ಹೌದು, ಭಕ್ತಿಯ ಮೂಲಕವೇ ಇದು ಸಾಧ್ಯ. ದೇವರನ್ನು ಅರಿಯಲು ಇದೇ ಮಾರ್ಗ; ಸೇವೆ ಮತ್ತು ಪ್ರೀತಿಯನ್ನು ವೃದ್ಧಿಸಿಕೊಳ್ಳುವ ಮೂಲಕವೇ ಇದನ್ನು ಸಾಧಿಸಬಹುದು. ಸೇವೆಯ ಹೊರತಾಗಿ ಇದಕ್ಕೆ ಬೇರೆ ದಾರಿಯಿಲ್ಲ.

'ಸೇವೋನ್ಮುಖೇ ಹಿ ಜಿಹ್ವಾದೌ' (ಭಕ್ತಿರಸಾಮೃತಸಿಂಧು 1.2.234). ನಿಮ್ಮ ಸೇವಾ ಮನೋಭಾವನೆ ಎಷ್ಟರಮಟ್ಟಿಗೆ ಹೆಚ್ಚುತ್ತದೆಯೋ, ಅಷ್ಟರಮಟ್ಟಿಗೆ ನಿಮ್ಮಲ್ಲಿ ಸುಪ್ತವಾಗಿರುವ ದೈವಿಕ ಪ್ರೀತಿಯೂ ವೃದ್ಧಿಯಾಗುತ್ತದೆ. ಒಮ್ಮೆ ನೀವು ದೇವರೆಡೆಗಿನ ಪ್ರೀತಿಯ ಪರಿಪೂರ್ಣ ಹಂತವನ್ನು ತಲುಪಿದಾಗ, ನೀವು ಯಾವಾಗಲೂ, ಪ್ರತಿ ಕ್ಷಣವೂ ದೇವರನ್ನು ಕಾಣಬಲ್ಲಿರಿ. ದಿನದ ಇಪ್ಪತ್ತನಾಲ್ಕು ಗಂಟೆಯೂ ಆ ದರ್ಶನವನ್ನು ಪಡೆಯಬಹುದು. ನಿಮಗೆಲ್ಲರಿಗೂ ಧನ್ಯವಾದಗಳು."

700518 - ಉಪನ್ಯಾಸ ISO 13-15 - ಲಾಸ್ ಎಂಜಲೀಸ್