Jump to content

KN/700510 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಬ್ರಹ್ಮಾಂಡದಲ್ಲಿ, ಅಂದರೆ ಭೌತಿಕ ಜಗತ್ತು ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ ನಾವು ಏನೇನು ಕಾಣುತ್ತೇವೆಯೋ, ಅದರಲ್ಲಿ ಆಧ್ಯಾತ್ಮಿಕ ಜಗತ್ತು ಕೃಷ್ಣನ ಅಂತರಂಗ ಶಕ್ತಿಯ ವಿಸ್ತರಣೆಯಾಗಿದೆ; ಭೌತಿಕ ಜಗತ್ತು ಕೃಷ್ಣನ ಬಹಿರಂಗ ಶಕ್ತಿಯ ವಿಸ್ತರಣೆಯಾಗಿದೆ; ಮತ್ತು ನಾವು ಜೀವಿಗಳು ತಟಸ್ಥಾ ಶಕ್ತಿಯ ವಿಸ್ತರಣೆಯಾಗಿದ್ದೇವೆ.

ಹೀಗೆ ಮೂರು ಬಗೆಯ ಶಕ್ತಿಗಳಿವೆ. ಕೃಷ್ಣನು ಅನೇಕ ಶಕ್ತಿಗಳನ್ನು ಹೊಂದಿದ್ದಾನೆ. ಆ ಎಲ್ಲಾ ಶಕ್ತಿಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ: ಅಂತರಂಗ-ಶಕ್ತಿ, ಬಹಿರಂಗ-ಶಕ್ತಿ ಮತ್ತು ತಟಸ್ಥಾ-ಶಕ್ತಿ. ಅಂತರಂಗ-ಶಕ್ತಿ ಎಂದರೆ ಆಂತರಿಕ ಶಕ್ತಿ; ಬಹಿರಂಗ-ಶಕ್ತಿ ಎಂದರೆ ಬಾಹ್ಯ ಶಕ್ತಿ; ಮತ್ತು ತಟಸ್ಥಾ-ಶಕ್ತಿ ಎಂದರೆ ಈ ಜೀವಿಗಳು. ನಾವು ಶಕ್ತಿಯಾಗಿದ್ದೇವೆ. ನಾವು ಶಕ್ತಿಯ ಸ್ವರೂಪವಾಗಿದ್ದೇವೆ."

700510 - ಉಪನ್ಯಾಸ ISO 07 - ಲಾಸ್ ಎಂಜಲೀಸ್