Jump to content

KN/700507 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನು ಗೋಲೋಕ ವೃಂದಾವನದಲ್ಲಿ ತನ್ನ ಪರಿವಾರದವರೊಂದಿಗೆ ಲೀಲೆಗಳಲ್ಲಿ ಮಗ್ನನಾಗಿದ್ದರೂ, ತನ್ನ ಸ್ಥಾನ, ಸ್ವರೂಪ, ರೂಪ ಮತ್ತು ಚಟುವಟಿಕೆಗಳಿಗೆ ಅನುಗುಣವಾಗಿ ಅವನು ಎಲ್ಲೆಡೆಯೂ ವ್ಯಾಪಿಸಿದ್ದಾನೆ.

ಅವನು ಸರ್ವವ್ಯಾಪಿ. ಆದ್ದರಿಂದಲೇ, ಪರಮೇಶ್ವರನು ನಡೆಯುತ್ತಾನೆ ಮತ್ತು ನಡೆಯುವುದಿಲ್ಲ ಎಂದು ಇಲ್ಲಿ ಹೇಳಲಾಗಿದೆ. ಅವನು ತನ್ನ ಧಾಮವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ; ಅಲ್ಲಿಯೇ ಸಂಪೂರ್ಣ ಆನಂದವನ್ನು ಅನುಭವಿಸುತ್ತಿರುತ್ತಾನೆ.

ಆದರೂ, ಅದೇ ಸಮಯದಲ್ಲಿ ಅವನು ಎಲ್ಲೆಡೆಯೂ ಇರುತ್ತಾನೆ; ಎಲ್ಲೆಡೆಯೂ ಸಂಚರಿಸುತ್ತಿರುತ್ತಾನೆ. ಉದಾಹರಣೆಗೆ, ನಾವು ಆಹಾರವನ್ನು ಅರ್ಪಿಸಿದಾಗ, ಕೃಷ್ಣನು ಅದನ್ನು ಸ್ವೀಕರಿಸುವುದಿಲ್ಲ ಎಂದು ಭಾವಿಸಬೇಡಿ.

ಕೃಷ್ಣನು ಅದನ್ನು ಸ್ವೀಕರಿಸುತ್ತಾನೆ, ಏಕೆಂದರೆ ನೀವು ಭಕ್ತಿಯಿಂದ ಏನನ್ನಾದರೂ ಅರ್ಪಿಸಿದರೆ ಅವನು ತಕ್ಷಣವೇ ತನ್ನ ಕೈಯನ್ನು ಚಾಚಬಲ್ಲನು.

'ತದ್‌ ಅಹಂ ಭಕ್ತ್ಯುಪಹೃತಮ್‌ ಅಶ್ನಾಮಿ' (ಭಗವದ್ಗೀತೆ ೯.೨೬) (BG 9.26). ಕೃಷ್ಣನು ಹೇಳುತ್ತಾನೆ, "ಯಾರಾದರೂ ನನಗೆ... ಶ್ರದ್ಧೆ ಮತ್ತು ಪ್ರೀತಿಯಿಂದ ಏನನ್ನಾದರೂ ಅರ್ಪಿಸಿದರೆ, ನಾನು ಅದನ್ನು ಸ್ವೀಕರಿಸುತ್ತೇನೆ (ಉಣ್ಣುತ್ತೇನೆ)."

ಜನರು ಹೀಗೆ ಕೇಳಬಹುದು: "ಓ, ಕೃಷ್ಣನು ಗೋಲೋಕ ವೃಂದಾವನದಲ್ಲಿ, ಬಹಳ ದೂರದಲ್ಲಿದ್ದಾನೆ. ಅವನು ಹೇಗೆ ಉಣ್ಣುತ್ತಾನೆ? ಹೇಗೆ ಸ್ವೀಕರಿಸುತ್ತಾನೆ?" ಆದರೆ, ಅವನು ಸಾಕ್ಷಾತ್ ಭಗವಂತ; ಹೌದು, ಅವನು ಅದನ್ನು ಸ್ವೀಕರಿಸಬಲ್ಲನು. ಆದ್ದರಿಂದಲೇ, "ಅವನು ನಡೆಯುತ್ತಾನೆ; ಅವನು ನಡೆಯುವುದಿಲ್ಲ" ಎಂದು ಹೇಳಲಾಗಿದೆ."

700507 - ಉಪನ್ಯಾಸ ISO 05 - ಲಾಸ್ ಎಂಜಲೀಸ್