Jump to content

KN/700506 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನು ಯಾವಾಗಲೂ ಗೋಲೋಕ ವೃಂದಾವನದಲ್ಲಿದ್ದರೂ, ಅವನಿಗೆ ನಿರ್ದಿಷ್ಟವಾದ ಯಾವುದೇ ಕೆಲಸವಿರುವುದಿಲ್ಲ; ಅವನು ಕೇವಲ ತನ್ನ ಸಂಗಾತಿಗಳಾದ ಗೋಪಿಯರು, ಗೋಪಾಲಕರು ಹಾಗೂ ತನ್ನ ತಾಯಿ-ತಂದೆಯರ ಸಾನ್ನಿಧ್ಯದಲ್ಲಿ ಆನಂದಿಸುತ್ತಿರುತ್ತಾನೆ. ಅವನು ಸಂಪೂರ್ಣವಾಗಿ ಸ್ವತಂತ್ರನಾಗಿರುತ್ತಾನೆ.

ಇನ್ನು ಅವನ ಸಂಗಾತಿಗಳಾದರೋ ಇನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಏಕೆಂದರೆ, ಆ ಸಂಗಾತಿಗಳಿಗೆ ಏನಾದರೂ ಅಪಾಯ ಒದಗಿದಾಗ ಅವರನ್ನು ಹೇಗೆ ರಕ್ಷಿಸಬೇಕೆಂಬ ಚಿಂತೆ ಕೃಷ್ಣನಿಗಿರುತ್ತದೆ; ಆದರೆ ಆ ಸಂಗಾತಿಗಳಿಗೆ ಮಾತ್ರ ಯಾವುದೇ ಚಿಂತೆಯಿರುವುದಿಲ್ಲ. 'ಓ, ಕೃಷ್ಣನಿದ್ದಾನಲ್ಲ' ಎಂಬ ಭಾವನೆಯೇ ಅವರಿಗೆ ಸಾಕು. ನೋಡಿ, ಆ ಸಂಗಾತಿಗಳಿಗೆ ಯಾವುದೇ ಚಿಂತೆಯಿರುವುದಿಲ್ಲ."

700506 - ಉಪನ್ಯಾಸ ISO 1-4 - ಲಾಸ್ ಎಂಜಲೀಸ್