KN/700505 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಕೃಷ್ಣೇರ ಸಂಸಾರ ಕರೋ ಛಾಡಿ ಅನಾಚಾರ" (ಭಕ್ತಿವಿನೋದ ಠಾಕೂರ). ಕೃಷ್ಣನ ಕುಟುಂಬದ ಸದಸ್ಯರಾಗೋಣ ಎಂಬುದೇ ನಮ್ಮ ಸಂದೇಶ.
ಅದೇ ನಮ್ಮ ಕಾರ್ಯಕ್ರಮ. ನಾವು ಕೃಷ್ಣನ ಕುಟುಂಬವನ್ನು ಸೇರಿದರೆ... ಕೃಷ್ಣನು ತನ್ನ ಸಂಗಾತಿಯೊಂದಿಗೆ ಆನಂದಿಸುವಂತೆಯೇ, ಅಲ್ಲಿ ಯಾವುದರ ಕೊರತೆಯೂ ಇರುವುದಿಲ್ಲ; ಎಲ್ಲವೂ ಅಲ್ಲಿರುತ್ತದೆ. ಕೃಷ್ಣನು ಭುಂಜಿಸುತ್ತಾನೆ, ಆನಂದಿಸುತ್ತಾನೆ, ನೃತ್ಯ ಮಾಡುತ್ತಾನೆ, ತನ್ನ ಪ್ರಸಾದವನ್ನು ಅರ್ಪಿಸುತ್ತಾನೆ - ಹೀಗೆ ಪರಸ್ಪರ ಭಾವವಿನಿಮಯವಿರುತ್ತದೆ. ಯಾವುದನ್ನೂ ನಿರಾಕರಿಸಲಾಗುವುದಿಲ್ಲ. ನಾವು ಕೃಷ್ಣ ಪ್ರಜ್ಞೆಯಲ್ಲಿ ಜೀವಿಸಿದರೆ, ನೂರಾರು, ಸಾವಿರಾರು ಅಥವಾ ಎಷ್ಟೇ ವರ್ಷಗಳ ಕಾಲವೂ ಜೀವಿಸಬಹುದು. ವಾಸ್ತವವಾಗಿ ನಾವು ಸಾಯುವುದಿಲ್ಲ. ಸಾವು ಮತ್ತು ಜನನ ಎಂದರೇನು? ಅವು ಈ ದೇಹಕ್ಕೆ ಸಂಬಂಧಿಸಿದವು. ಆದ್ದರಿಂದ ನಾವು ಶಾಶ್ವತರು; ಕೃಷ್ಣನೂ ಶಾಶ್ವತ." |
| 700505 - ಉಪನ್ಯಾಸ ISO 03 - ಲಾಸ್ ಎಂಜಲೀಸ್ |