Jump to content

KN/700503 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಸ ವೈ ಪುಂಸಾಂ ಪರೋ ಧರ್ಮೋ
ಯತೋ ಭಕ್ತಿರಧೋಕ್ಷಜೇ.
ಅಹೈತುಕ್ಯಪ್ರತಿಹತಾ
ಯಯಾತ್ಮಾ ಸುಪ್ರಸೀದತಿ.
(ಭಾಗವತ ಪುರಾಣ 1.2.6)
(SB 1.2.6)

"ಇದೇ ಭಾಗವತ ಧರ್ಮ. ಇದೇ ಅತ್ಯುನ್ನತ ಧರ್ಮ. ಅದು ಯಾವುದು? ಧಾರ್ಮಿಕ ತತ್ವಗಳನ್ನು ಪಾಲಿಸುವುದರ ಮೂಲಕ, ಮಾತು ಮತ್ತು ಮನಸ್ಸಿನ ವ್ಯಾಪ್ತಿಗೂ ಮೀರಿದ ಪರಮಾತ್ಮನ (ಅಧೋಕ್ಷಜ) ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು.

'ಅಧೋಕ್ಷಜ' ಎಂಬ ಪದವನ್ನು ಇಲ್ಲಿ ಬಳಸಲಾಗಿದೆ; ಇದರರ್ಥ ಭೌತಿಕ ಇಂದ್ರಿಯಗಳಿಗೆ ನಿಲುಕದವನು ಎಂದರ್ಥ. ಅಂತಹ ಪ್ರೀತಿ ಹೇಗಿರಬೇಕು? 'ಅಹೈತುಕೀ' - ಅಂದರೆ ಯಾವುದೇ ಕಾರಣ ಅಥವಾ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ.

'ಓ ದೇವರೇ, ನೀನು ನನಗೆ ಅನೇಕ ಉತ್ತಮ ವಸ್ತುಗಳನ್ನು ಒದಗಿಸಿಕೊಡುವುದರಿಂದ ನಾನು ನಿನ್ನನ್ನು ಪ್ರೀತಿಸುತ್ತೇನೆ; ನೀನು ನನ್ನ ಇಷ್ಟಾರ್ಥಗಳನ್ನು ಪೂರೈಸುವವನು' - ಹೀಗೆ ಅಲ್ಲ.

ಅಂತಹ ಪ್ರೀತಿಯಲ್ಲ ಅದು. ಯಾವುದೇ ವಿನಿಮಯದ ಅಪೇಕ್ಷೆಯಿಲ್ಲದ ಪ್ರೀತಿ. ಚೈತನ್ಯ ಮಹಾಪ್ರಭುಗಳು ಇದನ್ನೇ ಬೋಧಿಸಿದ್ದಾರೆ: 'ನೀನು ಏನೇ ಮಾಡಿದರೂ...' - 'ಆಶ್ಲಿಷ್ಯ ವಾ ಪದ-ರತಾಂ ಪಿನಷ್ಟು ಮಾಮ್' (ಚೈತನ್ಯ ಚರಿತಾಮೃತ ಅಂತ್ಯಲೀಲಾ 20.47) (CC Antya 20.47).

'ನೀನು ನನ್ನನ್ನು ನಿನ್ನ ಪಾದಗಳ ಕೆಳಗೆ ತುಳಿಯಬಹುದು ಅಥವಾ ಅಪ್ಪಿಕೊಳ್ಳಬಹುದು... ನಿನಗೆ ಇಷ್ಟವಾದಂತೆ ಮಾಡು. ನಿನ್ನ ದರ್ಶನವಾಗದೆ ನನ್ನ ಹೃದಯವು ನೊಂದರೂ ಪರವಾಗಿಲ್ಲ; ಆದರೂ ನೀನೇ ನನ್ನ ಆರಾಧ್ಯ ದೈವ.' ಇದೇ ನಿಜವಾದ ಪ್ರೀತಿ."

700503 - ಉಪನ್ಯಾಸ ISO 01 - ಲಾಸ್ ಎಂಜಲೀಸ್