Jump to content

KN/700430 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜಡಕ್ಕಿಂತ ನಾವು ಶ್ರೇಷ್ಠರಾಗಿರುವುದರಿಂದ, ಆ ಸ್ಥಾನವನ್ನು ನಾವು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ; ಹೀಗಾಗಿ ನಾವು ಬದ್ಧಜೀವಿಗಳಾಗಿದ್ದೇವೆ. ನಾವು ಅದನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ? ಜಡಕ್ಕಿಂತ ನಾನೇ ಶ್ರೇಷ್ಠ ಶಕ್ತಿಯಾಗಿದ್ದರೂ, ನಾನು ದೇವರಿಗೆ ಅಧೀನನಾಗಿದ್ದೇನೆ ಎಂಬ ಸತ್ಯವನ್ನು ನಾವು ಮರೆತಿದ್ದೇವೆ.

ಮನುಷ್ಯನು ಇದನ್ನು ಮರೆಯುತ್ತಿದ್ದಾನೆ. ಆಧುನಿಕ ನಾಗರಿಕತೆಯು ದೇವರನ್ನು ಪರಿಗಣಿಸುವುದಿಲ್ಲ, ಏಕೆಂದರೆ ಜನರು ಜಡಕ್ಕಿಂತ ಶ್ರೇಷ್ಠರೆಂದು ಅವರು ಭಾವಿಸುತ್ತಾರೆ. ಅವರು ಕೇವಲ ವಿವಿಧ ರೀತಿಯಲ್ಲಿ ಜಡವನ್ನು ಬಳಸಿಕೊಂಡು ಭೋಗಿಸಲು ಪ್ರಯತ್ನಿಸುತ್ತಿದ್ದಾರೆ.

ಆದರೆ ನಾವು ಅಮೆರಿಕನ್, ರಷ್ಯನ್, ಚೀನೀ ಅಥವಾ ಭಾರತೀಯರೇ ಆಗಿರಲಿ, ನಾವೆಲ್ಲರೂ ದೇವರಿಗೆ ಅಧೀನರಾಗಿದ್ದೇವೆ ಎಂಬುದನ್ನು ಮರೆಯುತ್ತಿದ್ದೇವೆ. ಇದೇ ತಪ್ಪು. 'ಕೃಷ್ಣ ಭುಲಿಯ ಜೀವ ಭೋಗ ವಾಂಛಾ ಕರೆ' (ಪ್ರೇಮ-ವಿವರ್ತ).

ಅವರು ಕೃಷ್ಣನನ್ನು ಮರೆತಿದ್ದಾರೆ ಮತ್ತು ಈ ಭೌತಿಕ ಜಗತ್ತನ್ನು ಭೋಗಿಸಲು ಬಯಸುತ್ತಾರೆ. ಇದೇ ಅವರ ರೋಗ. ಈಗ ನಮ್ಮ ಕರ್ತವ್ಯವೆಂದರೆ ಅವರಲ್ಲಿ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುವುದು; ಅಂದರೆ, "ನೀವು ಶ್ರೇಷ್ಠರು ಎಂಬುದು ಸರಿ, ಆದರೆ ನೀವು ಕೃಷ್ಣನಿಗೆ ಅಧೀನರಾಗಿದ್ದೀರಿ."

700430 - ಉಪನ್ಯಾಸ ISO 01 - ಲಾಸ್ ಎಂಜಲೀಸ್