KN/700109 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಕಠಿಣ ತಪಸ್ಸು ಮತ್ತು ಇತರ ವಿಧಾನಗಳಾದ ಇಂದ್ರಿಯ ನಿಗ್ರಹ, ಮನಸ್ಸಿನ ನಿಯಂತ್ರಣ ಹಾಗೂ ತ್ಯಾಗದಂತಹ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ; ಅಂದರೆ ನಮ್ಮನ್ನು ಉನ್ನತ ಸ್ಥಿತಿಗೇರಿಸಿಕೊಳ್ಳಲು ನಾವು ಚರ್ಚಿಸಿದ ಅನೇಕ ಮಾರ್ಗಗಳು ಅತ್ಯಗತ್ಯವಾಗಿವೆ.
ಆದರೆ ನಾವು ನಮ್ಮನ್ನು ಉನ್ನತೀಕರಿಸಿಕೊಳ್ಳಲು ಪ್ರಯತ್ನಿಸದೆ, ಪ್ರಾಣಿ ಸಹಜ ಪ್ರವೃತ್ತಿಗಳಲ್ಲೇ ಉಳಿದುಕೊಂಡರೆ, ನಾವು ಪ್ರಾಣಿಗಳಂತೆಯೇ ಇರುತ್ತೇವೆ. ಉದಾಹರಣೆಗೆ, ನೀವು ಯಾವುದಾದರೂ ಶಿಕ್ಷಣ ಸಂಸ್ಥೆಗೆ ಅಥವಾ ಶಾಲೆಗೆ ಸೇರಿದರೂ, ಅಲ್ಲಿನ ಶಿಕ್ಷಣದ ಸದುಪಯೋಗವನ್ನು ಪಡೆದುಕೊಳ್ಳದಿದ್ದರೆ, ನೀವು ಸೇರಿದ ಹಂತದಲ್ಲೇ ಉಳಿದುಬಿಡುತ್ತೀರ, ಆಗ ನೀವು ಆ ಸಂಸ್ಥೆಯ ಲಾಭವನ್ನು ಪಡೆಯದಂತಾಗಿ, ಮೂರ್ಖರಾಗಿ, ಅನಕ್ಷರಸ್ಥರಾಗಿ ಅಥವಾ ಅಜ್ಞಾನಿಗಳಾಗಿಯೇ ಉಳಿಯುತ್ತೀರಿ. ಅದೇ ರೀತಿಯಲ್ಲಿ, ಈ ಮಾನವ ಜನ್ಮದಲ್ಲಿ ಮಹರ್ಷಿಗಳು ಅಥವಾ ಪರಮ ಪುರುಷೋತ್ತಮನಾದ ಶ್ರೀಕೃಷ್ಣನು ನೀಡಿರುವ ಜ್ಞಾನದ ಸದುಪಯೋಗವನ್ನು ನೀವು ಪಡೆದುಕೊಳ್ಳದಿದ್ದರೆ, ಅದು ಶಿಕ್ಷಣಕ್ಕಾಗಿ ಈ ಅಪರೂಪದ ಮಾನವ ಜನ್ಮವನ್ನು ಪಡೆದರೂ ಅದರ ಲಾಭವನ್ನು ಪಡೆಯದೆ, ಅಂತಿಮ ಪರೀಕ್ಷೆಯಲ್ಲಿ ವಿಫಲರಾದಂತೆಯೇ ಸರಿ." |
| 700109 - ಉಪನ್ಯಾಸ SB 06.01.15 - ಲಾಸ್ ಎಂಜಲೀಸ್ |