Jump to content

KN/660829 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೃತ್ಯುವನ್ನು ಜಯಿಸುವುದು - ಇದೇ ಮುಖ್ಯ ಸಮಸ್ಯೆಯಾಗಿತ್ತು... ಕನಿಷ್ಠಪಕ್ಷ ಹಿಂದಿನ ವೈದಿಕ ನಾಗರಿಕತೆಯ ಕಾಲದಲ್ಲಾದರೂ. ಜ್ಞಾನದ ದೃಷ್ಟಿಯಿಂದ ಉನ್ನತ ಸ್ಥಾನದಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಧ್ಯೇಯವೇ ಮೃತ್ಯುವನ್ನು ಹೇಗೆ ಜಯಿಸುವುದು ಎಂಬುದಾಗಿತ್ತು.

ಆದರೆ ಪ್ರಸ್ತುತ ಸಮಯದಲ್ಲಿ, ಮೃತ್ಯುವನ್ನು ಜಯಿಸುವ ಆ ಪ್ರಶ್ನೆಯು ಗೌಣವಾಗಿದೆ. 'ಸಾವಿರಲಿ, ಸಾವೇನೂ ತಕ್ಷಣ ಬರುವುದಿಲ್ಲವಲ್ಲ; ಅಲ್ಲಿಯವರೆಗೆ ನಾನು ಭೋಗಜೀವನವನ್ನು ನಡೆಸುತ್ತಾ ಇಂದ್ರಿಯ ತೃಪ್ತಿಯನ್ನು ಪಡೆಯುತ್ತೇನೆ' - ಇದೇ ಈಗಿನ ನಾಗರಿಕತೆಯ ಮಾನದಂಡವಾಗಿದೆ.

ಆದರೆ ನಿಜವಾದ ಸಮಸ್ಯೆ ಮೃತ್ಯುವನ್ನು ಜಯಿಸುವುದು ಹೇಗೆ ಎಂಬುದೇ ಆಗಿದೆ. ವಿಜ್ಞಾನಿಗಳು ಹೀಗೆ ಯೋಚಿಸುತ್ತಾರೆ: 'ಓಹ್, ಮೃತ್ಯುವನ್ನು ಜಯಿಸಲು ಸಾಧ್ಯವಿಲ್ಲ. ಅದನ್ನು ಬಿಟ್ಟುಬಿಡಿ. ಬದಲಿಗೆ, ಮೃತ್ಯುವನ್ನು ತ್ವರಿತಗೊಳಿಸುವಂತಹ ಪರಮಾಣು ಬಾಂಬ್‌ನಂತಹ ಸಾಧನಗಳನ್ನು ಸಿದ್ಧಪಡಿಸೋಣ.' ಇದೇ ವೈಜ್ಞಾನಿಕ ಪ್ರಗತಿ!

ಮೃತ್ಯು ಇದ್ದೇ ಇದೆ; ಹಿಂದೆ ಜನರು ಅದನ್ನು ಜಯಿಸುವ ಬಗ್ಗೆ ಯೋಚಿಸುತ್ತಿದ್ದರು, ಆದರೆ ಈಗಿನವರು ಅದನ್ನು ತ್ವರಿತಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಮತ್ತು ಇದನ್ನೇ ಅವರು ಜ್ಞಾನದ ಪ್ರಗತಿ ಎಂದು ಕರೆಯುತ್ತಾರೆ."

660829 - ಉಪನ್ಯಾಸ BG 05.14-22 - ನ್ಯೂ ಯಾರ್ಕ್