Jump to content

KN/660711 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಈ ದೇಹಕ್ಕೆ ಸಂಬಂಧಿಸಿದಂತೆ ಯೋಚಿಸಿದಾಗ, ಅದು ಭೌತಿಕ ಹಂತವಾಗಿರುತ್ತದೆ. ಈ ದೇಹವನ್ನು ಗಮನದಲ್ಲಿಟ್ಟುಕೊಂಡು ಮಾಡುವ ಯಾವುದೇ ಕೆಲಸ - ಇಲ್ಲಿ 'ದೇಹ' ಎಂದರೆ ಇಂದ್ರಿಯಗಳು ಎಂದರ್ಥ.

ಅಂದರೆ, ಇಂದ್ರಿಯ ತೃಪ್ತಿಗಾಗಿ ನಾವು ಮಾಡುವ ಯಾವುದೇ ಕೆಲಸವು ಭೌತಿಕವಾಗಿರುತ್ತದೆ. ಆದರೆ ಪರಮಾತ್ಮನ ಸಂತೋಷಕ್ಕಾಗಿ ನಾವು ಮಾಡುವ ಯಾವುದೇ ಕೆಲಸವು ಆಧ್ಯಾತ್ಮಿಕ ಹಂತಕ್ಕೆ ಸೇರಿದ್ದಾಗಿರುತ್ತದೆ. ವಿಷಯವಿಷ್ಟೇ.

ಆದ್ದರಿಂದ ನಾವು ವಿವೇಚಿಸಬೇಕು: 'ನಾನು ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದೇನೆಯೇ ಅಥವಾ ಪರಮಾತ್ಮನ ಸಂತೋಷಕ್ಕಾಗಿ ಕೆಲಸ ಮಾಡುತ್ತಿದ್ದೇನೆಯೇ?' ಈ ಕಲೆಯು ನಮಗೆ ಕರಗತವಾದರೆ, ನಮ್ಮ ಜೀವನವು ಆಧ್ಯಾತ್ಮಿಕವಾಗುತ್ತದೆ.

ಆಧ್ಯಾತ್ಮಿಕ ಜೀವನ ಎಂದರೆ ನಾವು ಈಗಾಗಲೇ ತೊಡಗಿಸಿಕೊಂಡಿರುವ ಚಟುವಟಿಕೆಗಳನ್ನು ಬದಲಾಯಿಸಬೇಕೆಂದಲ್ಲ, ಅಥವಾ ನಮ್ಮ ದೇಹದ ರೂಪವು ಯಾವುದೋ ಅಸಾಧಾರಣವಾದದ್ದಾಗಿ ಬದಲಾಗುತ್ತದೆಂದೂ ಅಲ್ಲ. ಅಂತಹದೇನೂ ಇಲ್ಲ."

660711 - ಉಪನ್ಯಾಸ BG 04.01 and Review - ನ್ಯೂ ಯಾರ್ಕ್