KN/Prabhupada 0235 - ಅನರ್ಹ ಗುರುವಿಗೆ ಶಿಷ್ಯನಿಗೆ ಹೇಗೆ ಮಾರ್ಗದರ್ಶನ ನೀಡಬೇಕೆಂದು ತಿಳಿದಿರುವುದಿಲ್ಲ



Lecture on BG 2.4-5 -- London, August 5, 1973

ಆದುದರಿಂದ ಗುರೂನ್ ಅಹತ್ವಾ. ಕೃಷ್ಣನ ಭಕ್ತನಾದವನು, ಅಗತ್ಯ ಬಿದ್ದರೆ, ಒಬ್ಬ ಅಯೋಗ್ಯ ಗುರುವನ್ನು... ಅನರ್ಹ ಗುರುವಿಗೆ ಶಿಷ್ಯನಿಗೆ ಹೇಗೆ ಮಾರ್ಗದರ್ಶನ ನೀಡಬೇಕೆಂದು ತಿಳಿದಿರುವುದಿಲ್ಲ. ಗುರುವಿನ ಕರ್ತವ್ಯವೆಂದರೆ ಮಾರ್ಗದರ್ಶನ ನೀಡುವುದು. ಆದುದರಿಂದ ಅಂತಹ ಅನರ್ಹ ಗುರುವನ್ನು ಕನಿಷ್ಠಪಕ್ಷ ತಿರಸ್ಕರಿಸಬಹುದು. ಇದು ಜೀವ ಗೋಸ್ವಾಮಿಗಳ... ಕಾರ್ಯ-ಕಾರ್ಯಮ್ ಅಜಾನತಃ. ಸರಿ ತಪ್ಪುಗಳ ನಡುವಿನ ವ್ಯತ್ಯಾಸ ತಿಳಿಯದ ಗುರುಗಳನ್ನು, ಒಂದು ವೇಳೆ ತಿಳಿಯದೆ ಗುರುವೆಂದು ಸ್ವೀಕರಿಸಿದ್ದರೆ, ಅಂತಹವರನ್ನು ತ್ಯಜಿಸಬಹುದು. ಅವರನ್ನು ತ್ಯಜಿಸಿ, ನೀವು ಒಬ್ಬ ನೈಜ ಹಾಗೂ ಅಧಿಕೃತ ಗುರುವನ್ನು ಸ್ವೀಕರಿಸಬಹುದು. ಗುರುವನ್ನು ಕೊಲ್ಲಬಾರದು, ಬದಲಾಗಿ ಅವರನ್ನು ತಿರಸ್ಕರಿಸಬಹುದು ಅಷ್ಟೆ. ಇದು ಶಾಸ್ತ್ರದ ಆಜ್ಞೆ. ಆದುದರಿಂದ, ಭೀಷ್ಮದೇವ ಅಥವಾ ದ್ರೋಣಾಚಾರ್ಯರು ಖಂಡಿತವಾಗಿಯೂ ಗುರುಗಳಾಗಿದ್ದರು, ಆದರೆ ಕೃಷ್ಣನು ಪರೋಕ್ಷವಾಗಿ ಅರ್ಜುನನಿಗೆ ಸೂಚನೆ ನೀಡುತ್ತಿದ್ದಾನೆ, "ಅವರು ಗುರುವಿನ ಸ್ಥಾನದಲ್ಲಿದ್ದರೂ ಸಹ, ನೀನು ಅವರನ್ನು ತಿರಸ್ಕರಿಸಬಹುದು." ಕಾರ್ಯ-ಕಾರ್ಯಮ್ ಅಜಾನತಃ. "ಅವರಿಗೆ ವಾಸ್ತವದ ಅರಿವಿಲ್ಲ." ಈ ಭೀಷ್ಮದೇವ ತನ್ನ ಸ್ಥಾನವನ್ನು ಲೌಕಿಕ ದೃಷ್ಟಿಕೋನದಿಂದ ಪರಿಗಣಿಸಿದರು. ಪಾಂಡವರು ಪೋಷಕರಿಲ್ಲದ, ತಂದೆಯಿಲ್ಲದ ಮಕ್ಕಳು ಎಂಬುದು ಮೊದಲಿನಿಂದಲೂ ಅವರಿಗೆ ತಿಳಿದಿತ್ತು ಮತ್ತು ಅವರು ಪಾಂಡವರನ್ನು ಮೊದಲಿನಿಂದಲೂ ಬೆಳೆಸಿದ್ದರು. ಅಷ್ಟೇ ಅಲ್ಲದೆ, ಅವರಿಗೆ ಪಾಂಡವರ ಮೇಲೆ ಅಪಾರ ಪ್ರೀತಿಯಿತ್ತು. ಅವರು ಎಷ್ಟು ಮಮತೆ ಹೊಂದಿದ್ದರೆಂದರೆ, ಪಾಂಡವರು ವನವಾಸಕ್ಕೆ ಕಳುಹಿಸಲ್ಪಟ್ಟಾಗ ಭೀಷ್ಮದೇವ ಅತ್ತಿದ್ದರು. "ಈ ಐವರು ಹುಡುಗರು ಎಂತಹ ಪರಿಶುದ್ಧರು, ಎಂತಹ ಪ್ರಾಮಾಣಿಕರು! ಇವರು ಕೇವಲ ಪರಿಶುದ್ಧರು ಮತ್ತು ಪ್ರಾಮಾಣಿಕರು ಮಾತ್ರವಲ್ಲ, ಅರ್ಜುನ ಮತ್ತು ಭೀಮ ಮಹಾ ಪರಾಕ್ರಮಿಗಳು. ಇನ್ನು ಈ ದ್ರೌಪದಿಯಂತೂ ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ. ಅವರಿಗೆ ದೇವೋತ್ತಮ ಪರಮ ಪುರುಷನಾದ ಕೃಷ್ಣನೇ ಗೆಳೆಯನಾಗಿದ್ದಾನೆ. ಹಾಗಿರುವಾಗಲೂ ಇವರು ಕಷ್ಟಪಡುತ್ತಿದ್ದಾರಲ್ಲವೇ?", ಎಂದು ಅವರು ಅತ್ತಿದ್ದರು. ಅವರಿಗೆ ಅಷ್ಟೊಂದು ಪ್ರೀತಿಯಿತ್ತು. ಆದುದರಿಂದಲೇ, "ನಾನು ಭೀಷ್ಮರನ್ನು ಹೇಗೆ ಕೊಲ್ಲಲಿ?", ಎಂದು ಅರ್ಜುನನು ಆಲೋಚಿಸುತ್ತಿದ್ದಾನೆ. ಆದರೆ ಕರ್ತವ್ಯವು ಅತ್ಯಂತ ಪ್ರಬಲವಾದುದು. ಕೃಷ್ಣನು ಉಪದೇಶ ನೀಡುತ್ತಿದ್ದಾನೆ, "ಹೌದು, ಅವರನ್ನು ಕೊಲ್ಲಲೇಬೇಕು ಏಕೆಂದರೆ ಅವರು ಶತ್ರುಗಳ ಪಕ್ಷ ಸೇರಿದ್ದಾರೆ. ಅವರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಅವರು ನಿಮ್ಮ ಕಡೆ ಸೇರಬೇಕಿತ್ತು. ಆದುದರಿಂದ, ಅವರು ಈಗ ಗುರುವಿನ ಸ್ಥಾನದಲ್ಲಿ ಉಳಿದಿಲ್ಲ. ನೀನು ಅವರನ್ನು ಕೊಲ್ಲಲೇಬೇಕು. ಅವರು ತಪ್ಪಾಗಿ ಇನ್ನೊಂದು ಪಕ್ಷವನ್ನು ಸೇರಿದ್ದಾರೆ, ಆದುದರಿಂದ, ಅವರನ್ನು ಸಂಹರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ದ್ರೋಣಾಚಾರ್ಯರ ವಿಷಯವೂ ಅಷ್ಟೇ. ಅವರು ಮಹಾನ್ ವ್ಯಕ್ತಿತ್ವವುಳ್ಳವರು ಮತ್ತು ಅವರಿಗೆ ಅಪಾರ ಪ್ರೀತಿಯಿದೆ ಎಂಬುದು ನನಗೆ ತಿಳಿದಿದೆ. ಆದರೆ ಕೇವಲ ಲೌಕಿಕ ಕಾರಣಗಳಿಗಾಗಿ ಅವರು ಅಲ್ಲಿಗೆ ಹೋಗಿದ್ದಾರೆ." ಆ ಲೌಕಿಕ ಕಾರಣವೇನು? ಭೀಷ್ಮರು ಹೀಗೆ ಯೋಚಿಸಿದರು, "ನಾನು ದುರ್ಯೋಧನನ ಹಣದಿಂದ ಪೋಷಿಸಲ್ಪಟ್ಟಿದ್ದೇನೆ. ದುರ್ಯೋಧನನೇ ನನ್ನನ್ನು ಸಂರಕ್ಷಿಸುತ್ತಿದ್ದಾನೆ. ಈಗ ಅವನು ಸಂಕಷ್ಟದಲ್ಲಿದ್ದಾನೆ. ಈ ಸಮಯದಲ್ಲಿ ನಾನು ಶತ್ರುಗಳ ಪಕ್ಷಕ್ಕೆ ಹೋದರೆ, ನಾನು ಕೃತಘ್ನನಾಗುತ್ತೇನೆ. ಅವನು ನನ್ನನ್ನು ಇಷ್ಟು ಕಾಲ ಸಂರಕ್ಷಿಸಿದ್ದಾನೆ. ಇಂತಹ ಅಪಾಯದ ಸಮಯದಲ್ಲಿ ನಾನು ಇನ್ನೊಂದು ಕಡೆಗೆ ಹೋದರೆ ಅದು ಸರಿಯಲ್ಲ..." ಎಂದು ಅವರು ಭಾವಿಸಿದರು. "ದುರ್ಯೋಧನನು ನನ್ನನ್ನು ಪೋಷಿಸುತ್ತಿರಬಹುದು, ಆದರೆ ಅವನು ಪಾಂಡವರ ಆಸ್ತಿಯನ್ನು ಕಬಳಿಸಿದ್ದಾನೆ̧" ಎಂದು ಅವರು ಆಲೋಚಿಸಲಿಲ್ಲ. ಆದರೆ ಇದು ಅವರ ದೊಡ್ಡತನ. ಕೃಷ್ಣನು ಜೊತೆಗಿರುವಾಗ ಅರ್ಜುನನು ಎಂದಿಗೂ ಹತನಾಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. "ಆದುದರಿಂದ, ಲೌಕಿಕ ದೃಷ್ಟಿಯಿಂದ, ನಾನು ದುರ್ಯೋಧನನಿಗೆ ಕೃತಜ್ಞನಾಗಿರಬೇಕು", ಎಂದುಕೊಂಡರು. ದ್ರೋಣಾಚಾರ್ಯರ ಪರಿಸ್ಥಿತಿಯೂ ಇದೇ ಆಗಿತ್ತು. ಅವರೂ ಪೋಷಿಸಲ್ಪಡುತ್ತಿದ್ದರು.