KN/Prabhupada 0229 - ಒಬ್ಬ ಶಿಷ್ಯನಾದರೂ ಕೃಷ್ಣ ತತ್ವವನ್ನು ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನೋಡಲು ಬಯಸುತ್ತೇನೆ



Conversation with Indian Guests -- April 12, 1975, Hyderabad

ಪ್ರಭುಪಾದ: ಕಷ್ಟವೆಂದರೆ ನಾವು ನಿಯಮಿತ ವಿದ್ಯಾರ್ಥಿಯಾಗಲು ಬಯಸುವುದಿಲ್ಲ. ಅಡ್ಡಾದಿಡ್ಡಿಯಾಗಿ, ಅಲ್ಲಲಿ… ಆದರೆ ನಾನು ಹಾಗೆಯೇ ಉಳಿಯುತ್ತೇನೆ. ಇದು ಒಂದು ವಿಜ್ಞಾನ. (ಆಡಿಯೋ ಇಲ್ಲಿಂದ ಸ್ಕಿಪ್ ಆಗುತ್ತದೆ --->) ಜ್ಞಾನಂ ಮೇ ಪರಮಂ ಗುಹ್ಯಂ ಯದ್ ವಿಜ್ಞಾನ-ಸಮನ್ವಿತಮ್. ತದ್ ವಿಜ್ಞಾನ ಸಮನ್ವಿತಮ್. ಜ್ಞಾನಂ ತೇ 'ಹಂ ಸ-ವಿಜ್ಞಾನಂ ಪ್ರವಕ್ಷ್ಯಾಮಿ ಅನಸೂಯವೇ, ಯಜ್ ಜ್ಞಾತ್ವಾ ನ ಅನ್ಯಜ್ ಜ್ಞಾತವ್ಯಂ ಅವಶಿಷ್ಯತೇ... (ಭ.ಗೀ 7.2). ಆದರೆ ವೇದಗಳು ಹಾಗೆ ಹೇಳುವುದಿಲ್ಲ. (<--- ಆಡಿಯೋ ಇಲ್ಲಿಗೆ ಸ್ಕಿಪ್ ಆಗುತ್ತದೆ). ವೇದಗಳು ಹೇಳುತ್ತವೆ, ತದ್ ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್ (ಮುಂಡಕೋಪನಿಷತ್ 1.2.12). ನೀಮಗೆ ಅದನ್ನು ಕಲಿಯಲು ಶ್ರದ್ಧೆಯಿದ್ದರೆ, ತದ್ ವಿಜ್ಞಾನ. ತದ್ ವಿಜ್ಞಾನಂ, ಗುರುಂ ಏವಾಭಿಗಚ್ಛೇತ್. ನೀವು ನಿಮಗೆ ಕಲಿಸಬಲ್ಲ ನಿಜವಾದ ಗುರುವಿನ ಬಳಿಗೆ ಹೋಗಬೇಕು. ಆದರೆ ಯಾರೂ ಗಂಭೀರವಾಗಿಲ್ಲ. ಅದೇ ಕಷ್ಟ. ಪ್ರಕೃತಿ ಅವರ ಕಿವಿಹಿಂಡುತ್ತಿದರೂ ಎಲ್ಲರೂ "ನಾನು ಸ್ವತಂತ್ರ" ಎಂದು ಯೋಚಿಸುತ್ತಿದ್ದಾರೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ (ಭ.ಗೀ 3.27). ನೀವು ಹೀಗೆ ಮಾಡಿದ್ದೀರಿ, ಬನ್ನಿ, ಇಲ್ಲಿ ಕುಳಿತುಕೊಳ್ಳಿ. ಅವರನ್ನು ಪ್ರಕೃತಿ ಹೀಗೆ ನಡೆಸುತ್ತಿದೆ. ಅಹಂಕಾರ-ವಿಮೂಢಾತ್ಮಾ ಕರ್ತಾಹಂ ಇತಿ ಮನ್ಯತೇ (ಭ.ಗೀ 3.27). ತನ್ನ ಸುಳ್ಳು ಅಹಂಕಾರದಿಂದ ಮೋಸಹೋದ ದುಷ್ಟನು, "ನಾನೇ ಎಲ್ಲವೂ. ನಾನು ಸ್ವತಂತ್ರನು", ಎಂದು ಭಾವಿಸುತ್ತಿದ್ದಾನೆ. ಹಾಗೆ ಯೋಚಿಸುತ್ತಿರುವವರನ್ನು ಭಗವದ್ಗೀತೆಯಲ್ಲಿ “ಅಹಂಕಾರ ವಿಮೂಢಾತ್ಮ” ಎಂದು ವಿವರಿಸಲಾಗಿದೆ. ಸುಳ್ಳು ಅಹಂಕಾರವು ಗೊಂದಲಕ್ಕೊಳಗಾಗುತ್ತದೆ ಮತ್ತು, "ನಾನು ಯೋಚಿಸುತ್ತಿರುವುದು ಸರಿ", ಎಂದು ತಿಳಿಯುತ್ತದೆ. ಇಲ್ಲ, ನೀವು ನಿಮ್ಮದೇ ಆದ ರೀತಿಯಲ್ಲಿ ಯೋಚಿಸಲು ಸಾಧ್ಯವಿಲ್ಲ. ಕೃಷ್ಣ ಹೇಳುವಂತೆ ಯೋಚಿಸಿದಾಗ ನೀವು ಸರಿ. ಇಲ್ಲದಿದ್ದರೆ, ನೀವು ಮಾಯೆಯ ಮೋಡಿಯಲ್ಲಿ ಸಿಲುಕಿ ಯೋಚಿಸುತ್ತಿದ್ದೀರಿ, ಅಷ್ಟೆ. ತ್ರಿಭಿರ್ ಗುಣಮಾಯೈರ್ ಭವೈರ್ ಮೋಹಿತ, ನ 'ಭಿಜಾನಾತಿ ಮಾಮ್ ಈಭ್ಯಃ ಪರಮ ಅವ್ಯಯಂ (ಭ.ಗೀ 7.13). ಮಯಾಧ್ಯಕ್ಷೇಣ ಪ್ರಕೃತಿ ಸೂಯತೇ ಸ-ಚರಾಚರಂ (ಭ.ಗೀ 9.10). ಈ ವಿಷಯಗಳಿವೆ. ಭಗವದ್ಗೀತೆಯನ್ನು ಸಂಪೂರ್ಣವಾಗಿ ಓದಿ, ನಿಯಮ ನಿಬಂಧನೆಗಳನ್ನು ಅನುಸರಿಸಿದಾಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ. ನೀವು ಎಲ್ಲಿಯವರೆಗೆ ಇದೂ ಸರಿ, ಅದೂ ಸರಿ ಎನ್ನುವಿರೋ, ಅಲ್ಲಿಯ ತನಕ ಸರಿಯಾದದ್ದನ್ನು ಮಾಡುವುದಿಲ್ಲ. ನೀವೆಲ್ಲರೂ ದಾರಿ ತಪ್ಪುತ್ತೀರಿ. ಅಷ್ಟೇ. ಕೃಷ್ಣ ಹೇಳುವುದು ಸರಿ. ಅದು (ಅಸ್ಪಷ್ಟ) ಆಗಿರಬೇಕು. ಇಲ್ಲದಿದ್ದರೆ ನೀವು ದಾರಿ ತಪ್ಪುತ್ತೀರಿ.

ಆದ್ದರಿಂದ, ನಾವು ಈ ತತ್ವಶಾಸ್ತ್ರವನ್ನು ಆ ರೀತಿಯಲ್ಲಿ ಬೋಧಿಸಲು ಪ್ರಯತ್ನಿಸುತ್ತಿದ್ದೇವೆ. ಬಹುಶಃ, ಅಲ್ಪ ಸಂಖ್ಯೆ ಇರಬಹುದು, ಆದರೆ ಏಕಶ್ ಚಂದ್ರಸ್ ತಮೋ ಹಂತಿ ನ ಚಿತ್ತರ ಸಹಸ್ರ. ಒಬ್ಬ ಚಂದ್ರನಿದ್ದರೆ ಸಾಕು. ಲಕ್ಷಾಂತರ ನಕ್ಷತ್ರಗಳು ಮಿನುಗುವುದರಿಂದ ಏನು ಪ್ರಯೋಜನ. ಅದೇ ನಮ್ಮ ಪ್ರಚಾರ. ಒಬ್ಬ ಮನುಷ್ಯನು ಕೃಷ್ಣ ತತ್ವಶಾಸ್ತ್ರ ಏನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಸಾಕು ನನ್ನ ಉಪದೇಶ ಯಶಸ್ವಿಯಾಗುತ್ತದೆ. ಅಷ್ಟೆ. ಬೆಳಕಿಲ್ಲದ ಲಕ್ಷಾಂತರ ನಕ್ಷತ್ರಗಳು ನಮಗೆ ಬೇಡ. ಬೆಳಗದ ಲಕ್ಷಾಂತರ ನಕ್ಷತ್ರಗಳ ಉಪಯೋಗವೇನು? ಅದು ಚಾಣಕ್ಯ ಪಂಡಿತರ ಸಲಹೆ, ವರಮ್ ಏಕ ಪುತ್ರ ನ ಚವುರ್ ಕಸತನ್ ಅಪಿ. ಒಬ್ಬ ಮಗ, ಅವನು ವಿದ್ಯಾವಂತನಾದರೆ ಸಾಕು. ನ ಚಾವುರ್ ಕಸತನ್ ಅಪಿ. ನೂರಾರು ಪುತ್ರರಿದ್ದು, ಎಲ್ಲರೂ ಮೂರ್ಖರು ಮತ್ತು ದುಷ್ಟರಾದರೆ ಏನು ಪ್ರಯೋಜನ? ಏಕಶ್ ಚಂದ್ರಸ್ ತಮೋ ಹಂತಿ ನ ಚಿತ್ತರ ಸಹಸ್ರಸ್. ಬೆಳಗಲು ಒಂದು ಚಂದ್ರ ಸಾಕು. ಲಕ್ಷಾಂತರ ನಕ್ಷತ್ರಗಳ ಅಗತ್ಯವಿಲ್ಲ. ಅದೇ ರೀತಿ, ನಾವು ಲಕ್ಷಾಂತರ ಶಿಷ್ಯರ ಹಿಂದೆ ಬಿದ್ದಿಲ್ಲ. ಕನಿಷ್ಠ ಒಬ್ಬ ಶಿಷ್ಯನಾದರೂ ಕೃಷ್ಣ ತತ್ವವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನೋಡಲು ಬಯಸುತ್ತೇನೆ. ಅದೇ ನಿಜವಾದ ಯಶಸ್ಸು. ಅಷ್ಟೇ.

ಕೃಷ್ಣ ಹೇಳುತ್ತಾನೆ, ಯತತಾಮ್ ಅಪಿ ಸಿದ್ಧಾನಾಮ್ (ಭ.ಗೀ 7.3), ಕಶ್ಚಿದ್ ವೇತ್ತಿ ಮಾಂ ತತ್ತ್ವತಃ. ಆದ್ದರಿಂದ, ಮೊದಲನೆಯದಾಗಿ ಸಿದ್ಧನಾಗುವುದು ತುಂಬಾ ಕಷ್ಟ. ತದನಂತರ, ಯತತಾಮ್ ಅಪಿ ಸಿದ್ಧಾನಾಮ್ (ಭ.ಗೀ 7.3). ಅದು ಇನ್ನೂ ಕಠಿಣ. ಹಾಗಾಗಿ, ಕೃಷ್ಣ ತತ್ವವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಒಂದುವೇಳೆ ಜನರು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಿದ್ದರೆ, ಅದು ನಿಜವಾದ ತಿಳುವಳಿಕೆಯಲ್ಲ. ಇದು ಸುಲಭವೇ; ನೀವು ಕೃಷ್ಣನ ಮಾತುಗಳನ್ನು ಒಪ್ಪಿಕೊಂಡರೆ ಇದು ಬಹಳ ಸುಲಭ. ಏನು ತೊಂದರೆ? ಕೃಷ್ಣ ಹೇಳುತ್ತಾನೆ, ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು (ಭ.ಗೀ 18.65), "ಯಾವಾಗಲೂ ನನ್ನನ್ನು ಸ್ಮರಿಸು." ಇದರಲ್ಲಿ ತೊಂದರೆ ಏನಿದೆ? ನೀವು ಕೃಷ್ಣನ ಚಿತ್ರವನ್ನು ನೋಡಿದ್ದೀರಿ, ಕೃಷ್ಣನ ಮೂರ್ತಿಯನ್ನು ನೋಡಿದ್ದೀರಿ, ಹೀಗಿರುವಾಗ ಕೃಷ್ಣನನ್ನು ಸ್ಮರಿಸಲು ತೊಂದರೆ ಏನಿದೆ? ಏನೇ ಆದರೂ, ನಾವು ಏನಾದರು ಯೋಚಿಸಲೇಬೇಕು. ಹಾಗಿದ್ದ ಮೇಲೆ, ಬೇರೆ ಯಾವುದೋ ವಿಷಯದ ಬದಲು ಕೃಷ್ಣನನ್ನು ಏಕೆ ಸ್ಮರಿಸಬಾರದು? ತೊಂದರೆ ಏನಿದೆ? ಆದರೆ ಅವನು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವನಿಗೆ ಕೃಷ್ಣನನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳನ್ನು ಸ್ಮರಿಸಬೇಕಿರುತ್ತದೆ. ಕೃಷ್ಣ ಹೇಳುತ್ತಾನೆ, ಮನ್ಮನಾ ಭವ ಮದ್ಭಕ್ತ. ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಲು ಯಾವುದೇ ತೊಂದರೆಯಿಲ್ಲ. ಖಂಡಿತವಾಗಿಯೂ ಇಲ್ಲ. ಆದರೆ ಜನರು ಅದನ್ನು ಸ್ವೀಕರಿಸುವುದಿಲ್ಲ, ಅದೇ ಸಮಸ್ಯೆ. ಅವರು ಕೇವಲ ವಾದ ಮಾಡುತ್ತಾರೆ. ಕೂಟಕ. ಕೃಷ್ಣನು, “ಮನ್ಮನಾ ಭವ ಮದ್ಭಕ್ತ”, ಎನ್ನುತ್ತಿದ್ದಾನೆ, ಇದರ ವಿರುದ್ಧ ವಾದಿಸಲು ಏನಿದೆ? ಅವರು ಕೃಷ್ಣನನ್ನು ಸ್ಮರಿಸದೆ ಇರಬಹುದು ಅಥವಾ ಕೃಷ್ಣನ ಬಗ್ಗೆ ಮಾತನಾಡದೆ ಇರಬಹುದು ಎಂದು ನೀವು ಹೇಳುತ್ತಿದ್ದೀರಿ. ಆದರೆ ಕೃಷ್ಣ ಹೇಳುತ್ತಾನೆ, ಮನ್ಮನಾ ಭವ ಮದ್ಭಕ್ತ. ಇದು ಕೇವಲ ವಾದವಷ್ಟೇ, ತತ್ವವಲ್ಲ. ತತ್ವವು ನೇರವಾಗಿದೆ - "ನೀನು ಹೀಗೆ ಮಾಡಬೇಕು", ಅಷ್ಟೇ. ನೀವು ಅದನ್ನು ಮಾಡಿ ಮತ್ತು ಫಲಿತಾಂಶವನ್ನು ಪಡೆಯಿರಿ.

ನೀವು ಯಾವುದನ್ನೋ ಕೊಳ್ಳಲು ಹೋಗುತ್ತೀರಿ, ಬೆಲೆ ನಿಗದಿಯಾಗಿದೆ, ನೀವು ಆ ಬೆಲೆಯನ್ನು ನೀಡಿ ಅದನ್ನು ಪಡೆಯುತ್ತೀರಿ. ಅಲ್ಲಿ ವಾದವೇನಿದೆ? ನೀವು ಆ ವಸ್ತುವಿನ ಬಗ್ಗೆ ಆಸಕ್ತರಾಗಿದ್ದರೆ, ಬೆಲೆಯನ್ನು ಕೊಟ್ಟು ಪಡೆದುಕೊಳ್ಳಿ. ಶ್ರೀಲ ರೂಪ ಗೋಸ್ವಾಮಿಗಳ ಉಪದೇಶವೂ ಇದೇ ಆಗಿದೆ: ಕೃಷ್ಣ-ಭಕ್ತಿ ರಸ-ಭಾವಿತಾ-ಮತಿ ಕ್ರಿಯತಾಂ ಯದಿ ಕುತೋ ʼಪಿ ಲಭ್ಯತೇ. ಎಲ್ಲಾದರೂ ಕೃಷ್ಣನ ಸ್ಮರಣೆಯು ಲಭ್ಯವಿದ್ದರೆ ಅದನ್ನು ಕೊಳ್ಳಿ - ಕೃಷ್ಣಭಕ್ತಿ ರಸಭಾವಿತಾ ಮತಿ. ಇದನ್ನೇ ನಾವು "ಕೃಷ್ಣ ಪ್ರಜ್ಞೆ" ಎಂದು ಅನುವಾದಿಸಿದ್ದೇವೆ. ಈ ಕೃಷ್ಣ ಪ್ರಜ್ಞೆಯನ್ನು ಎಲ್ಲಾದರೂ ಕೊಳ್ಳಲು ಸಾಧ್ಯವಾದರೆ, ಕೂಡಲೇ ಕೊಳ್ಳಿ. ಕೃಷ್ಣಭಕ್ತಿ ರಸಭಾವಿತಾ ಮತಿಃ ಕ್ರಿಯತಾಂ, ಕೂಡಲೇ ಕೊಳ್ಳಿ, ಯದಿ ಕುತೋಪಿ ಲಭ್ಯತೇ, ಎಲ್ಲಾದರೂ ದೊರೆತರೆ. ಒಂದು ವೇಳೆ ನಾನು ಕೊಳ್ಳಬೇಕೆಂದರೆ, ಅದರ ಬೆಲೆ ಎಷ್ಟು? ತತ್ರ ಲೌಲ್ಯಮೇಕಂ ಮೂಲಂ, ನ ಜನ್ಮ-ಕೋಟಿಭಿಃ ಲಭ್ಯತೇ. ಬೆಲೆ ಏನು ಎಂದು ನಿಮಗೆ ತಿಳಿಯಬೇಕಿದ್ದರೆ, ಅದರ ಬೆಲೆ ಕೇವಲ ನಿಮ್ಮ ಹಂಬಲ. ಮತ್ತು ಆ ಹಂಬಲವನ್ನು ಪಡೆಯಲು ಕೋಟ್ಯಂತರ ಜನ್ಮಗಳು ಬೇಕಾಗುತ್ತವೆ. ನಿಮಗೆ ಕೃಷ್ಣ ಏಕೆ ಬೇಕು? ಮೊನ್ನೆ ನಾನು ಹೇಳಿದಂತೆ, ಒಬ್ಬನು ಕೃಷ್ಣನನ್ನು ನೋಡಿದರೆ, ಅವನು ಕೃಷ್ಣನಿಗಾಗಿ ಹುಚ್ಚನಾಗುತ್ತಾನೆ. ಅದೇ ಅದರ ಲಕ್ಷಣ.