KN/Prabhupada 0227 - ನಾನೇಕೆ ಸಾಯುತ್ತೇನೆ? ನನಗೆ ಸಾಯಲು ಇಷ್ಟವಿಲ್ಲ



Lecture -- Los Angeles, May 18, 1972

ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ವಾಸ್ತವವಾಗಿ, ಭಗವಂತನನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟಕರವಾದ ವಿಷಯ. ಆದರೆ ಭಗವಂತನು ಭಗವದ್ಗೀತೆಯಲ್ಲಿ ಸ್ವತಃ ತನ್ನನ್ನು ತಾನೆ ವಿವರಿಸುತ್ತಿದ್ದಾನೆ. "ನಾನು ಹೀಗಿದ್ದೇನೆ, ನಾನು ಹೀಗಿದ್ದೇನೆ. ಈ ಭೌತಿಕ ಪ್ರಕೃತಿ ಹೀಗಿದೆ. ಈ ಆಧ್ಯಾತ್ಮಿಕ ಪ್ರಕೃತಿ ಹೀಗಿದೆ, ಜೀವಿಗಳು ಹೀಗಿವೆ..." ಎಲ್ಲವನ್ನೂ ಭಗವದ್ಗೀತೆಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಭಗವಂತನು ಸ್ವತಃ ತನ್ನದೇ ಆದ ಜ್ಞಾನವನ್ನು ನೀಡುತ್ತಾನೆ. ಅದು ಭಗವಂತನನ್ನು ಅರ್ಥಮಾಡಿಕೊಳ್ಳುವ ಏಕೈಕ ಪ್ರಕ್ರಿಯೆ. ಇಲ್ಲದಿದ್ದರೆ, ಊಹೆಯಿಂದ ನಾವು ಭಗವಂತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅವನು ಅಪರಿಮಿತ, ನಾವು ಸೀಮಿತ. ನಮ್ಮ ಜ್ಞಾನ, ನಮ್ಮ ಗ್ರಹಿಕೆ, ಅವೆಲ್ಲವೂ ಬಹಳ ಸೀಮಿತವಾಗಿವೆ. ಹಾಗಾದರೆ ನಾವು ಅಪರಿಮಿತವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ನಾವು ಆ ಅಪರಿಮಿತನ ಆವೃತ್ತಿಯನ್ನು ಒಪ್ಪಿಕೊಂಡರೆ — ಅವನು ಹೀಗಿದ್ದಾನೆ, ಹಾಗಿದ್ದಾನೆ — ಆಗ ನಾವು ಅರ್ಥಮಾಡಿಕೊಳ್ಳಬಹುದು. ಅದು ಪರಿಪೂರ್ಣ ಜ್ಞಾನ. ಭಗವಂತರ ಊಹಾತ್ಮಕ ಜ್ಞಾನಕ್ಕೆ ಯಾವುದೇ ಮೌಲ್ಯವಿಲ್ಲ. ನಿಜವಾದ ಜ್ಞಾನ… ನಾನು ಈ ಉದಾಹರಣೆಯನ್ನು ನೀಡುತ್ತೇನೆ. ಒಬ್ಬ ಹುಡುಗ ತನ್ನ ತಂದೆ ಯಾರು ಎಂದು ತಿಳಿಯಲು ಬಯಸಿದರೆ ಅವನ ತಾಯಿಯನ್ನು ಕೇಳುವುದೆ ಸುಲಭದಾರಿ. ಅಥವಾ ತಾಯಿ, "ಇಗೋ ನಿನ್ನ ತಂದೆ", ಎಂದು ಹೇಳುತ್ತಾಳೆ. ಅದು ಪರಿಪೂರ್ಣ ಜ್ಞಾನ. ಆದರೆ ಅವನು, "ನನ್ನ ತಂದೆ ಯಾರು?", ಎಂದು ಊಹಿಸಿ ಇಡೀ ನಗರವನ್ನು, "ನೀನು ನನ್ನ ತಂದೆಯೇ? ನೀನು ನನ್ನ ತಂದೆಯೇ?", ಎಂದು ಕೇಳಿದರೆ ಆ ಜ್ಞಾನವು ಯಾವಾಗಲೂ ಅಪೂರ್ಣವಾಗಿ ಉಳಿಯುತ್ತದೆ. ಅವನ ತಂದೆ ಯಾರೆಂದು ಅವನು ಎಂದಿಗೂ ತಿಳಿಯುವುದಿಲ್ಲ. ಆದರೆ ಈ ಸರಳ ಪ್ರಕ್ರಿಯೆ, ಅಂದರೆ ಅವನು ತನ್ನ ತಂದೆಯ ಬಗ್ಗೆ ತಿಳಿದ ತಾಯಿಯಿಂದ, "ನನ್ನ ಪ್ರೀತಿಯ ಮಗು, ಇವರು ನಿನ್ನ ತಂದೆ", ಎಂಬ ಜ್ಞಾನವನ್ನು ಪಡೆದರೆ ಆ ಜ್ಞಾನವು ಪರಿಪೂರ್ಣ.

ಅದೇ ರೀತಿ, ಅತೀಂದ್ರಿಯ ಜ್ಞಾನ... ನಾನು ಆಧ್ಯಾತ್ಮಿಕ ಜಗತ್ತು ಇದೆ ಎಂದು ಹೇಳುತ್ತಿದ್ದಂತೆ. ಅದು ನಮ್ಮ ಊಹಾಪೋಹದ ವಿಷಯವಲ್ಲ. ಆದರೆ ಭಗವಂತನು, "ಹೌದು, ಆಧ್ಯಾತ್ಮಿಕ ಜಗತ್ತು ಇದೆ, ಅದು ನನ್ನ ಪ್ರಧಾನ ಕಛೇರಿ", ಎಂದು ಹೇಳಿದಾಗ ಅದು ವಾಸ್ತವ. ಅದು ನಿಜ. ಹೌದು. ಆದ್ದರಿಂದ, ನಾವು ಅತ್ಯುತ್ತಮ ಅಧಿಕಾರೊಯಾದ ಕೃಷ್ಣನಿಂದ ಜ್ಞಾನವನ್ನು ಪಡೆಯುತ್ತೇವೆ. ಆದ್ದರಿಂದ, ನಮ್ಮ ಜ್ಞಾನವು ಪರಿಪೂರ್ಣ. ನಾವು ಪರಿಪೂರ್ಣರಲ್ಲ, ಆದರೆ ನಮ್ಮ ಜ್ಞಾನವು ಪರಿಪೂರ್ಣವಾಗಿದೆ. ಏಕೆಂದರೆ ನಾವು ಪರಿಪೂರ್ಣನಿಂದ ಜ್ಞಾನವನ್ನು ಪಡೆಯುತ್ತೇವೆ. ಮತ್ತೆ ಅದೇ ಉದಾಹರಣೆ: ನನ್ನ ತಂದೆ ಯಾರು ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಪರಿಪೂರ್ಣನಲ್ಲ. ಆದರೆ ನನ್ನ ತಾಯಿ ಪರಿಪೂರ್ಣಳು. ನಾನು ನನ್ನ ತಾಯಿಯ ಪರಿಪೂರ್ಣ ಜ್ಞಾನವನ್ನು ಸ್ವೀಕರಿಸುವುದರಿಂದ, ನನ್ನ ತಂದೆಯ ಕುರಿತ ನನ್ನ ಜ್ಞಾನವು ಪರಿಪೂರ್ಣವಾಗಿದೆ. ಆದ್ದರಿಂದ, ಈ ಕೃಷ್ಣ ಪ್ರಜ್ಞೆ ಚಳುವಳಿಯು ಮಾನವ ಸಮಾಜಕ್ಕೆ ಪರಿಪೂರ್ಣ ಜ್ಞಾನವನ್ನು ನೀಡುವುದಕ್ಕಾಗಿದೆ. ಭಗವಂತನು ಯಾರು, ಈ ಭೌತಿಕ ಜಗತ್ತು ಏನು, ನೀವು ಇಲ್ಲಿಗೆ ಏಕೆ ಬಂದಿದ್ದೀರಿ, ನೀವೇಕೆ ಇಷ್ಟೊಂದು ಕಷ್ಟಗಳನ್ನು ಜೀವನದ ದುಃಖಕರ ಸ್ಥಿತಿಯನ್ನು ಅನುಭವಿಸಬೇಕು, ನಾನೇಕೆ ಸಾಯುತ್ತೇನೆ… ನನಗೆ ಸಾಯಲು ಇಷ್ಟವಿಲ್ಲ, ಆದರೆ ಸಾವು ಕಡ್ಡಾಯ. ನನಗೆ ವೃದ್ಧನಾಗಲು ಇಷ್ಟವಿಲ್ಲ, ಆದರೆ ಅದು ಕಡ್ಡಾಯ. ನನಗೆ ರೋಗದಿಂದ ಬಳಲುವುದು ಇಷ್ಟವಿಲ್ಲ, ಆದರೆ ಅದು ಕಡ್ಡಾಯ. ಇವುಗಳನ್ನು ಪರಿಹರಿಸಬೇಕು. ಅದು ನಿಜವಾಗಿಯೂ ಮಾನವ ಜೀವನದ ಸಮಸ್ಯೆಗಳು.

ಆಹಾರ, ನಿದ್ರೆ, ಮೈಥುನ, ಮತ್ತು ರಕ್ಷಣೆಯ ವಿಧಾನವನ್ನು ಹೆಚಿಸುವುದು ಮಾತ್ರವಲ್ಲ. ಅದು ಮಾನವ ಜೀವನವಲ್ಲ. ಮನುಷ್ಯ ನಿದ್ರಿಸುತ್ತಾನೆ, ನಾಯಿಯೂ ನಿದ್ರಿಸುತ್ತದೆ. ಮನುಷ್ಯ ತುಂಬಾ ಒಳ್ಳೆಯ ಮನೆಯಲ್ಲಿ ನಿದ್ರಿಸುತ್ತಾನೆ ಎಂದರೆ ಅವನು ನಾಯಿಗಿಂತ ಹೆಚ್ಚು ಮುಂದುವರಿದಿದ್ದಾನೆ ಎಂದರ್ಥವಲ್ಲ. ಮಲಗುವುದು ಕಾರ್ಯ, ಅಷ್ಟೆ. ಏಕೆಂದರೆ ಮನುಷ್ಯನು ರಕ್ಷಿಸಲು ಪರಮಾಣು ಆಯುಧವನ್ನು ಕಂಡುಹಿಡಿದಿದ್ದಾನೆ, ಮತ್ತು ನಾಯಿಗೆ ಉಗುರುಗಳು ಮತ್ತು ಹಲ್ಲುಗಳಿವೆ... ಅವನು ಸಹ ರಕ್ಷಿಸಿಕೊಳ್ಳಬಹುದು. ಆದ್ದರಿಂದ, ರಕ್ಷಿಸಿಕೊಳ್ಳುವುದು ಅಷ್ಟೆ. "ನನ್ನ ಬಳಿ ಈ ಪರಮಾಣು ಬಾಂಬ್ ಇರುವುದರಿಂದ, ನಾನು ಇಡೀ ಜಗತ್ತನ್ನು ಅಥವಾ ಇಡೀ ವಿಶ್ವವನ್ನು ವಶಪಡಿಸಿಕೊಳ್ಳಬಲ್ಲೆ", ಎಂದು ನೀವು ಹೇಳಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ನೀವು ನಿಮ್ಮದೇ ಆದ ರೀತಿಯಲ್ಲಿ ರಕ್ಷಿಸಿಕೊಳ್ಳಬಹುದು, ಮತ್ತು ನಾಯಿಯೂ ತನ್ನದೇ ಆದ ರೀತಿಯಲ್ಲಿ ರಕ್ಷಿಸಿಕೊಳ್ಳಬಹುದು. ಆದ್ದರಿಂದ, ರಕ್ಷಿಸಿಕೊಳ್ಳುವ ಸುಂದರವಾದ ವಿಧಾನ, ತಿನ್ನುವ ಸುಂದರವಾದ ವಿಧಾನ, ಮಲಗುವ ಸುಂದರವಾದ ವಿಧಾನ, ಮತ್ತು ಲೈಂಗಿಕ ಜೀವನದ ಸುಂದರವಾದ ವಿಧಾನವು ಒಂದು ರಾಷ್ಟ್ರ ಅಥವಾ ವ್ಯಕ್ತಿಯನ್ನು ಮುನ್ನಡೆಸುವುದಿಲ್ಲ. ಅದು ಪ್ರಗತಿಯಲ್ಲ. ಅದು ಒಂದೇ ವಿಷಯ. ಪ್ರಮಾಣಾನುಗುಣವಾಗಿ, ಐದರ ಮೇಲೆ ಎರಡು ಸಾವಿರ, ಐನೂರರ ಮೇಲೆ ಎರಡು ಸಾವಿರ, ಮತ್ತು ಐದರ ಮೇಲೆ ಇಪ್ಪತ್ತು, ಒಂದೇ ಅನುಪಾತ. ಆದ್ದರಿಂದ, ಪ್ರಾಣಿಗಳ ಗುಣಗಳನ್ನು ಒಂದು ರೀತಿಯಲ್ಲಿ, ಅಂದರೆ ವೈಜ್ಞಾನಿಕ ರೀತಿಯಲ್ಲಿ ನಯಗೊಳಿಸಿದರೆ ಮಾನವ ಸಮಾಜವು ಮುಂದುವರೆದಿದೆ ಎಂದು ಅರ್ಥವಲ್ಲ. ಅದನ್ನು ನಯಗೊಂಡ ಪ್ರಾಣಿತ್ವ ಎಂದು ಕರೆಯಬಹುದು. ಅಷ್ಟೆ. ನಿಜವಾದ ಪ್ರಗತಿ ಎಂದರೆ ಭಗವಂತನನ್ನು ತಿಳಿದುಕೊಳ್ಳುವುದು. ಅದು ಪ್ರಗತಿ.