Jump to content

KN/Prabhupada 0247 - ಭಗವಂತನನ್ನು ಪ್ರೀತಿಸುವುದೇ ನೈಜ ಧರ್ಮ

From Vanipedia
Revision as of 22:34, 19 October 2026 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0247 - in all Languages Category:KN-Quotes - 1973 Category:KN-Quotes - Lectures, Bhagavad-gita As It Is Category:KN-Quotes - in United Kingdom <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0246 - Anyone who Becomes a Devotee of Krsna, all the Good Qualities Manifest in...")
(diff) ← Older revision | Latest revision (diff) | Newer revision → (diff)


Lecture on BG 2.9 -- London, August 15, 1973

ಭಗವದ್ಗೀತೆಯು ಇದರೊಂದಿಗೆ ಮುಕ್ತಾಯವಾಗುತ್ತದೆ: ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಮತ್ತು ಭಾಗವತವು ಆ ಹಂತದಿಂದ ಪ್ರಾರಂಭವಾಗುತ್ತದೆ. ಆದುದರಿಂದ, ಭಗವದ್ಗೀತೆಯು ಶ್ರೀಮದ್-ಭಾಗವತದ ಪ್ರಾಥಮಿಕ ಅಧ್ಯಯನವಾಗಿದೆ. ಭಾಗವತವು ಪ್ರಾರಂಭವಾಗುವುದು ಇಲ್ಲಿಂದ, “ಧರ್ಮಃ ಪ್ರೋಜ್ಜಿತ-ಕೈತವಃ ಅತ್ರ, ಈಗ, ಈ ಶ್ರೀಮದ್-ಭಾಗವತದಲ್ಲಿ, ಎಲ್ಲಾ ವಂಚನೆಯ ರೀತಿಯ ಧರ್ಮಗಳನ್ನು ತಿರಸ್ಕರಿಸಲಾಗಿದೆ, ಪ್ರೋಜ್ಜಿತ.” ಆದುದರಿಂದ, ಅಲ್ಲಿ ಒಂದು ಕೊಂಡಿ ಇದೆ. ನಿಜವಾದ ಧರ್ಮ ಎಂದರೆ ಭಗವಂತನನ್ನು ಪ್ರೀತಿಸುವುದು. ಅದೇ ನಿಜವಾದ ಧರ್ಮ. ಭಾಗವತವು ಹೇಳುತ್ತದೆ, ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರ್ ಅಧೋಕ್ಷಜೇ: (ಶ್ರೀ.ಭಾ 1.2.6) "ಅದು ಪ್ರಥಮ ದರ್ಜೆಯ ಧರ್ಮ." ಅದರ ಅರ್ಥ ನೀವು ಈ ಯಾವ ಯಾವೋ ಧರ್ಮವನ್ನು ಪಾಲಿಸುತ್ತೀರಿ ಎಂದಲ್ಲ. ನೀವು ಯಾವುದೇ ಧರ್ಮವನ್ನು ಪಾಲಿಸಬಹುದು. ಅದು ಹಿಂದೂ ಧರ್ಮವೇ ಆಗಿರಲಿ ಅಥವಾ ಕ್ರಿಶ್ಚಿಯನ್ , ಅಥವಾ ಮಹಮ್ಮದೀಯ, ಅದು ಮುಖ್ಯವಲ್ಲ. ನಿಮಗೆ ಇಷ್ಟವಾದ ಯಾವುದಾದರೂ ಸರಿ. ಆದರೆ ನಾವು ಪರೀಕ್ಷಿಸಬೇಕು. ಹೇಗೆಂದರೆ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿಯಂತೆ. "ನೀನು ಯಾವ ಕಾಲೇಜಿನಿಂದ ನಿನ್ನ ಪರೀಕ್ಷೆಯಲ್ಲಿ ಉತ್ತೀರ್ಣನಾದೆ?”, ಎಂದು ಯಾರೂ ವಿಚಾರಿಸುವುದಿಲ್ಲ. “ನೀನು ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೀಯಾ? ಅಷ್ಟು ಸಾಕು." ಮತ್ತು ನೀವು ಪದವೀಧರರೋ ಅಥವಾ ಸ್ನಾತಕೋತ್ತರ ಪದವೀಧರರೋ ಎಂಬುದರಲ್ಲಿ ನಮ್ಮ ಆಸಕ್ತಿ. ಅಷ್ಟೇ. ಯಾರೂ ವಿಚಾರಿಸುವುದಿಲ್ಲ, "ನೀನು ಯಾವ ಕಾಲೇಜಿನಿಂದ, ಯಾವ ದೇಶದಿಂದ, ಯಾವ ಧರ್ಮದಿಂದ, ನಿನ್ನ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣನಾದೆ?" ಇಲ್ಲ. ಅದೇ ರೀತಿ, "ನೀವು ಯಾವ ಧರ್ಮಕ್ಕೆ ಸೇರಿದವರು?", ಎಂದು ಯಾರೂ ವಿಚಾರಿಸಬಾರದು. ಭಗವಂತನನ್ನು ಪ್ರೀತಿಸುವುದು ಹೇಗೆ ಎಂಬ ಈ ಕಲೆಯನ್ನು ಅವನು ಕಲಿತಿದ್ದಾನೆಯೇ ಎಂದು ನೋಡಬೇಕು. ಅಷ್ಟೇ. ಅದೇ ಧರ್ಮ. ಏಕೆಂದರೆ ಧರ್ಮ ಇಲ್ಲಿದೆ: ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಇದೇ ಧರ್ಮ. ಭಾಗವತವು ಹೇಳುತ್ತದೆ: ಧರ್ಮಃ ಪ್ರೋಜ್ಜಿತ-ಕೈತವಃ ಅತ್ರ: ಎಲ್ಲಾ ವಂಚನೆಯ ರೀತಿಯ ಧರ್ಮವನ್ನು ಈ ಭಾಗವತದಿಂದ ಒದ್ದು ಹೊರಹಾಕಲಾಗಿದೆ. ಕೇವಲ ನಿರ್ಮತ್ಸರಾಣಾಮ್, ಯಾರು ಭಗವಂತನ ಬಗ್ಗೆ ಅಸೂಯೆ ಪಡುವುದಿಲ್ಲವೋ... "ನಾನೇಕೆ ಭಗವಂತನನ್ನು ಪ್ರೀತಿಸಬೇಕು? ಅವನನ್ನು ಪೂಜಿಸಬೇಕು? ಅವನನ್ನು ಒಪ್ಪಿಕೊಳ್ಳಬೇಕು?" ಅವರೆಲ್ಲರೂ ರಾಕ್ಷಸರು. ಯಾರು ಪ್ರೀತಿಸುವ ಬಗ್ಗೆ ನಿಜವಾಗಿಯೂ ಗಂಭೀರವಾಗಿದ್ದಾರೋ ಅವರಿಗಾಗಿ ಮಾತ್ರ ಶ್ರೀಮದ್-ಭಾಗವತವು. ಅಹೈತುಕೀ ಅಪ್ರತಿಹತಾ ಯೇನಾತ್ಮಾ ಸಂಪ್ರಸೀದತಿ.

ಆದುದರಿಂದ ಜೀವನದ ನಿಜವಾದ ಯಶಸ್ಸು ಎಂದರೆ ನೀವು ಭಗವಂತನನ್ನು ಪ್ರೀತಿಸುವುದು ಹೇಗೆಂದು ಕಲಿತಾಗ. ಆಗ ನಿಮ್ಮ ಹೃದಯವು ತೃಪ್ತಿಯಾಗುತ್ತದೆ. ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ (ಭ.ಗೀ 6.20-23). ನಿಮಗೆ ಕೃಷ್ಣ ಅಥವಾ ಭಗವಂತನು ಸಿಕ್ಕಿದರೆ... ಕೃಷ್ಣ ಎಂದರೆ ಭಗವಂತ. ನೀವು ಭಗವಂತನ ಮತ್ತೊಂದು ಹೆಸರನ್ನು ಹೊಂದಿದ್ದರೆ, ಅದನ್ನೂ ಸಹ ಒಪ್ಪಿಕೊಳ್ಳಲಾಗುತ್ತದೆ. ಆದರೆ ಭಗವಂತ, ಪರಮ ಪುರುಷ ಭಗವಂತ… ನೀವು ಇದನ್ನು ಪಡೆದಾಗ... ಏಕೆಂದರೆ ನಾವು ಯಾರನ್ನಾದರೂ ಪ್ರೀತಿಸುತ್ತಿದ್ದೇವೆ. ಪ್ರೀತಿಸುವ ಪ್ರವೃತ್ತಿ ಅಲ್ಲಿದೆ. ಪ್ರತಿಯೊಬ್ಬರಲ್ಲಿಯೂ. ಆದರೆ ಅದು ತಪ್ಪಾದ ದಿಕ್ಕಿನಲ್ಲಿದೆ. ಆದುದರಿಂದ, ಕೃಷ್ಣನು ಹೇಳುತ್ತಾನೆ, "ಈ ಎಲ್ಲಾ ಪ್ರೀತಿಯ ವಸ್ತುಗಳನ್ನು ಒದ್ದು ಹೊರಹಾಕು. ನನ್ನನ್ನು ಪ್ರೀತಿಸಲು ಪ್ರಯತ್ನಿಸು." ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ (ಭ.ಗೀ 18.66). ಈ ರೀತಿಯಾಗಿ, ನಿಮ್ಮ ಪ್ರೀತಿಯು ನಿಮ್ಮನ್ನು ಎಂದಿಗೂ ತೃಪ್ತಿಪಡಿಸಲು ಸಾಧ್ಯವಾಗುವುದಿಲ್ಲ. ಯೇನಾತ್ಮಾ ಸಂಪ್ರಸೀದತಿ. ನಿಮಗೆ ನಿಜವಾದ ತೃಪ್ತಿ ಬೇಕಾದರೆ, ಆಗ ನೀವು ಕೃಷ್ಣನನ್ನು, ಅಥವಾ ಭಗವಂತನನ್ನು ಪ್ರೀತಿಸಬೇಕು. ಅದೇ ವೈದಿಕ ತತ್ವಶಾಸ್ತ್ರದ ಸಂಪೂರ್ಣ ತತ್ವಶಾಸ್ತ್ರ. ಅಥವಾ ಯಾವುದೇ ತತ್ವಶಾಸ್ತ್ರವಾಗಲಿ. ಏಕೆಂದರೆ ಏನೇ ಆದರೂ, ನೀವು ನಿಮ್ಮ ತೃಪ್ತಿಯನ್ನು, ನಿಮ್ಮ ಮನಸ್ಸಿನ ಸಂಪೂರ್ಣ ತೃಪ್ತಿಯನ್ನು ಬಯಸುತ್ತೀರಿ. ನೀವು ಭಗವಂತನನ್ನು ಪ್ರೀತಿಸಿದಾಗ ಮಾತ್ರ ಅದನ್ನು ಸಾಧಿಸಲು ಸಾಧ್ಯ. ಆದುದರಿಂದ, ಅಭ್ಯರ್ಥಿಗೆ ಭಗವಂತನನ್ನು ಪ್ರೀತಿಸುವುದು ಹೇಗೆ ಎಂದು ಬೋಧಿಸುವ, ತರಬೇತಿ ನೀಡುವ ಆ ಧರ್ಮವು ಪ್ರಥಮ ದರ್ಜೆಯದ್ದಾಗಿದೆ. ಅದೇ ಪ್ರಥಮ ದರ್ಜೆಯ ಧರ್ಮ.

ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿಃ... (ಶ್ರೀ.ಭಾ 1.2.6). ಮತ್ತು ಬೇಷರತ್ತಾದ ಪ್ರೀತಿ. ಹೇಗೆಂದರೆ ಇಲ್ಲಿ ಈ ಭೌತಿಕ ಜಗತ್ತಿನಲ್ಲಿ, "ನಾನು ನಿನ್ನನ್ನು ಪ್ರೀತಿಸುತ್ತೇನೆ; ನೀನು ನನ್ನನ್ನು ಪ್ರೀತಿಸುತ್ತೀಯೆ." ಯಾವುದೋ ಒಳ ಉದ್ದೇಶವಿರುತ್ತದೆ. ಅಹೈತುಕ್ಯಪ್ರತಿಹತಾ. ಅಹೈತುಕೀ, ಯಾವ ಉದ್ದೇಶವೂ ಇಲ್ಲ. ಅನ್ಯಾಭಿಲಾಷಿತಾ-ಶೂನ್ಯಮ್ [ಭಕ್ತಿ-ರಸಾಮೃತ-ಸಿಂಧು 1.1.11]. ಇತರ ಎಲ್ಲಾ ಆಸೆಗಳನ್ನು ಶೂನ್ಯ ಮಾಡುವುದು. ಶೂನ್ಯ. ಅದನ್ನು ಭಗವದ್ಗೀತೆಯಲ್ಲಿ ಬೋಧಿಸಲಾಗುತ್ತದೆ.