Jump to content

KN/Prabhupada 0245 - ಪ್ರತಿಯೊಬ್ಬರೂ ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾರೆ

From Vanipedia
Revision as of 00:26, 25 September 2026 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0245 - in all Languages Category:KN-Quotes - 1973 Category:KN-Quotes - Lectures, Bhagavad-gita As It Is Category:KN-Quotes - in United Kingdom <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0244 - Our Philosophy is that Everything Belongs to God|0244|Prabhupada 0246 - An...")
(diff) ← Older revision | Latest revision (diff) | Newer revision → (diff)


Lecture on BG 2.9 -- London, August 15, 1973

ಕೃಷ್ಣನು ಇಂದ್ರಿಯಗಳ ಒಡೆಯ. ಇಡೀ ಜಗತ್ತು ಇಂದ್ರಿಯ ತೃಪ್ತಿಗಾಗಿ ಹೆಣಗಾಡುತ್ತಿದೆ. "ಮೊದಲನೆಯದಾಗಿ, ಕೃಷ್ಣನು ಭೋಗಿಸಲಿ. ಆತನು ಒಡೆಯನು. ಆಮೇಲೆ ನಾವು ಆನಂದಿಸುತ್ತೇವೆ." ತೇನ ತ್ಯಕ್ತೇನ ಭುಂಜೀಥಾಃ. ಈಶೋಪನಿಷತ್ತು ಹೇಳುತ್ತದೆ ಪ್ರತಿಯೊಂದೂ ಕೃಷ್ಣನಿಗೆ ಸೇರಿದೆ ಎಂದು. ಈಶಾವಾಸ್ಯಮ್ ಇದಂ ಸರ್ವಮ್: "ಪ್ರತಿಯೊಂದೂ ಕೃಷ್ಣನಿಗೆ ಸೇರಿದೆ" (ಈಶೋಪನಿಷತ್ 1). ಇದೇ ನಮ್ಮ ತಪ್ಪು. ಪ್ರತಿಯೊಂದೂ ಕೃಷ್ಣನಿಗೆ ಸೇರಿದೆ, ಆದರೆ ನಾವು ಯೋಚಿಸುತ್ತಿದ್ದೇವೆ, "ಪ್ರತಿಯೊಂದೂ ನನಗೆ ಸೇರಿದೆ", ಎಂದು. ಇದು ಭ್ರಮೆ. ಅಹಂ ಮಮೇತಿ. ಅಹಂ ಮಮೇತಿ. ಜನಸ್ಯ ಮೋಹೋಽಯಮ್ ಅಹಂ ಮಮೇತಿ (ಶ್ರೀ.ಭಾ 5.5.8). ಇದು ಒಂದು ಭ್ರಮೆ. ಪ್ರತಿಯೊಬ್ಬರೂ ಯೋಚಿಸುತ್ತಿದ್ದಾರೆ: "ನಾನು ಈ ದೇಹ, ಮತ್ತು ಈ ಜಗತ್ತಿನಲ್ಲಿ ಕಾಣುವ ಪ್ರತಿಯೊಂದೂ ನನ್ನಿಂದ ಭೋಗಿಸಲ್ಪಡಬೇಕು". ಇದು ನಾಗರಿಕತೆಯ ತಪ್ಪು. ಜ್ಞಾನವೇನೆಂದರೆ: "ಪ್ರತಿಯೊಂದೂ ಭಗವಂತನಿಗೆ ಸೇರಿದೆ. ಆತನು ನನಗೆ ಏನನ್ನು ನೀಡುತ್ತಾನೋ, ಕರುಣೆಯಿಂದ ಅನುಮತಿಸುತ್ತಾನೋ, ಅದನ್ನು ಮಾತ್ರ ನಾನು ಸ್ವೀಕರಿಸಬಹುದು." ತೇನ ತ್ಯಕ್ತೇನ ಭುಂಜೀಥಾಃ. ಇದು ವೈಷ್ಣವ ತತ್ವವಲ್ಲ; ಇದು ವಾಸ್ತವಾಂಶ. ಯಾರೂ ಮಾಲೀಕರಲ್ಲ. ಈಶಾವಾಸ್ಯಮ್ ಇದಂ ಸರ್ವಮ್. ಕೃಷ್ಣನು ಹೇಳುತ್ತಾನೆ, "ನಾನೇ ಭೋಗಿಸುವವನು. ನಾನೇ ಒಡೆಯನು." ಸರ್ವ-ಲೋಕ-ಮಹೇಶ್ವರಮ್ (ಭ.ಗೀ 5.29). ಮಹಾ-ಈಶ್ವರಮ್. ಮಹಾ ಎಂದರೆ ಶ್ರೇಷ್ಠ. ನಾವು ಈಶ್ವರಮ್ ಎಂದು, ನಿಯಂತ್ರಕ ಎಂದು ವಾದಿಸಬಹುದು, ಆದರೆ ಕೃಷ್ಣನನ್ನು ಮಹಾ-ಈಶ್ವರಮ್, "ನಿಯಂತ್ರಕರ ನಿಯಂತ್ರಕ" ಎಂದು ವರ್ಣಿಸಲಾಗಿದೆ. ಅದು ಕೃಷ್ಣ. ಯಾರೂ ಸ್ವತಂತ್ರ ನಿಯಂತ್ರಕರಲ್ಲ.

ಕೃಷ್ಣನನ್ನು ಹೃಷೀಕೇಶ ಎಂದು ವರ್ಣಿಸಲಾಗಿದೆ. ಹೃಷೀಕೇಣ ಹೃಷೀಕೇಶ-ಸೇವನಂ ಭಕ್ತಿರ್ ಉಚ್ಯತೇ (ಚೈ.ಚ ಮದ್ಯ 19.170). ಮತ್ತು ಭಕ್ತಿ ಎಂದರೆ ಹೃಷೀಕೇಶನನ್ನು ಹೃಷೀಕದ ಮೂಲಕ ಸೇವಿಸುವುದು. ಹೃಷೀಕ ಎಂದರೆ ಇಂದ್ರಿಯಗಳು. ಕೃಷ್ಣನು ಇಂದ್ರಿಯಗಳ ಒಡೆಯನು. ನಾನು ಪಡೆದಿರುವ ಯಾವುದೇ ಇಂದ್ರಿಯಗಳಿರಲಿ, ಒಡೆಯನು ಕೃಷ್ಣನು; ಮಾಲೀಕನು ಕೃಷ್ಣನು. ಆದುದರಿಂದ, ನಮ್ಮ ಇಂದ್ರಿಯಗಳನ್ನು ಇಂದ್ರಿಯಗಳ ಒಡೆಯನ ತೃಪ್ತಿಗಾಗಿ ತೊಡಗಿಸಿದಾಗ, ಅದನ್ನು ಭಕ್ತಿ ಎನ್ನಲಾಗುತ್ತದೆ. ಇದು ಭಕ್ತಿಯ, ಭಕ್ತಿ ಸೇವೆಯ ವ್ಯಾಖ್ಯಾನವಾಗಿದೆ. ಮತ್ತು ಇಂದ್ರಿಯಗಳನ್ನು ಒಡೆಯನಿಗಾಗಿ ಅಲ್ಲದೆ, ನಮ್ಮ ಇಂದ್ರಿಯ ತೃಪ್ತಿಗಾಗಿ ತೊಡಗಿಸಿದಾಗ ಅದನ್ನು ಕಾಮ ಎನ್ನಲಾಗುತ್ತದೆ. ಕಾಮ ಮತ್ತು ಪ್ರೇಮ. ಪ್ರೇಮ ಎಂದರೆ ಕೃಷ್ಣನನ್ನು ಪ್ರೀತಿಸುವುದು ಮತ್ತು ಪ್ರತಿಯೊಂದನ್ನೂ ಕೃಷ್ಣನ ತೃಪ್ತಿಗಾಗಿ ಮಾಡುವುದು. ಅದು ಪ್ರೇಮ, ಪ್ರೀತಿ. ಮತ್ತು ಕಾಮ ಎಂದರೆ ಪ್ರತಿಯೊಂದನ್ನೂ ನನ್ನ ಇಂದ್ರಿಯಗಳ ತೃಪ್ತಿಗಾಗಿ ಮಾಡುವುದು. ಇದೇ ವ್ಯತ್ಯಾಸ. ಇಂದ್ರಿಯವು ಮಾಧ್ಯಮವಾಗಿದೆ. ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಿ, ಅಥವಾ ನೀವು ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಿ. ಆದರೆ ನೀವು ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಿದಾಗ ಪರಿಪೂರ್ಣರಾಗುತ್ತೀರಿ, ಮತ್ತು ನೀವು ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಿದಾಗ ಅಪೂರ್ಣರಾಗುತ್ತೀರಿ, ಭ್ರಮೆಗೊಳಗಾಗುತ್ತೀರಿ. ಏಕೆಂದರೆ ನೀವು ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಅದು ಕೃಷ್ಣನಿಲ್ಲದೆ ಸಾಧ್ಯವಿಲ್ಲ. ಹೃಷೀಕೇಣ ಹೃಷೀಕೇಶ-ಸೇವನಂ ಭಕ್ತಿರ್ ಉಚ್ಯತೇ (ಚೈ.ಚ ಮದ್ಯ 19.170).

ಆದುದರಿಂದ, ಒಬ್ಬನು ಇಂದ್ರಿಯಗಳನ್ನು ಶುದ್ಧೀಕರಿಸಿಕೊಳ್ಳಬೇಕು. ಈ ಕ್ಷಣ, ಪ್ರತಿಯೊಬ್ಬರೂ ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಹಂ ಮಮೇತಿ. ಜನಸ್ಯ ಮೋಹೋಽಯಮ್ (ಶ್ರೀ.ಭಾ 5.5.8). ಪುಂಸಃ ಸ್ತ್ರಿಯಾ ಮೈಥುನೀ-ಭಾವಮ್ ಏತತ್. ಇಡೀ ಭೌತಿಕ ಜಗತ್ತು ಅದೇ... ಎರಡು ಜೀವಿಗಳಿವೆ, ಗಂಡು ಮತ್ತು ಹೆಣ್ಣು. ಗಂಡು ಮತ್ತು ಹೆಣ್ಣು ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ, ತಥಾಕಥಿತ ಪ್ರೀತಿ ಎಂದರೆ... ಅಲ್ಲಿ ಪ್ರೀತಿಯೇ ಇಲ್ಲ. ಅದು ಪ್ರೀತಿಯಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಗಂಡು ಮತ್ತು ಹೆಣ್ಣು ಪರಸ್ಪರ ಅವರ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿಲ್ಲ. ಅವರವರ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಒಬ್ಬ ಸ್ತ್ರೀಯು ತನ್ನ ಇಂದ್ರಿಯಗಳನ್ನು ತೃಪ್ತಿಪಡಿಸಿಕೊಳ್ಳಲು ಪುರುಷನನ್ನು ಪ್ರೀತಿಸುತ್ತಿದ್ದಾಳೆ, ಅವನು ಸ್ತ್ರೀಯನ್ನು ಪ್ರೀತಿಸುತ್ತಿದ್ದಾನೆ ತನ್ನ... ಆದುದರಿಂದ, ಇಂದ್ರಿಯ ತೃಪ್ತಿಯಲ್ಲಿ ಸ್ವಲ್ಪವೇ ತೊಂದರೆಯಾದ ತಕ್ಷಣ, ವಿಚ್ಛೇದನ. "ನನಗೆ ಬೇಡ." ಏಕೆಂದರೆ ಕೇಂದ್ರ ಬಿಂದುವು ವೈಯಕ್ತಿಕ ಇಂದ್ರಿಯ ತೃಪ್ತಿಯಾಗಿದೆ. ಆದರೆ ಪ್ರದರ್ಶನಕಾಗಿ, ಬೂಟಾಟಿಕೆ, "ಓ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ." ಅಲ್ಲಿ ಯಾವುದೇ ಪ್ರೀತಿ ಇಲ್ಲ. ಅದೆಲ್ಲವೂ ಕಾಮ, ಕಾಮವಾಸನೆ. ಭೌತಿಕ ಜಗತ್ತಿನಲ್ಲಿ, ಪ್ರೀತಿಯ ಸಾಧ್ಯತೆಯೇ ಇರಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಈ ತಥಾಕಥಿತ ಪ್ರೀತಿ, ಇದು ವಂಚನೆ, ಕೇವಲ ವಂಚನೆ. "ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಏಕೆಂದರೆ ನೀನು ಸುಂದರವಾಗಿದ್ದೀಯೆ. ಅದು ನನ್ನ ಇಂದ್ರಿಯಗಳನ್ನು ತೃಪ್ತಿಪಡಿಸುತ್ತದೆ. ನೀನು ಯೌವನದಲ್ಲಿದ್ದೀಯೆ, ಅದು ನನ್ನ ಇಂದ್ರಿಯಗಳನ್ನು ತೃಪ್ತಿಪಡಿಸುತ್ತದೆ." ಇದೇ ಜಗತ್ತು. ಭೌತಿಕ ಜಗತ್ತು ಎಂದರೆ ಇದೆ. ಪುಂಸಃ ಸ್ತ್ರಿಯಾ ಮೈಥುನೀ-ಭಾವಮ್ ಏತತ್. ಈ ಭೌತಿಕ ಜಗತ್ತಿನ ಇಡೀ ಮೂಲ ತತ್ವವೇ ಇಂದ್ರಿಯ ತೃಪ್ತಿಯಾಗಿದೆ. ಯನ್ ಮೈಥುನಾದಿ-ಗೃಹಮೇಧಿ-ಸುಖಂ ಹಿ ತುಚ್ಛಂ ಕಂಡೂಯನೇನ ಕರಯೋರ್ ಇವ ದುಃಖ-ದುಃಖಮ್ (ಶ್ರೀ.ಭಾ 7.9.45).